ಸೋನು ಶ್ರೀನಿವಾಸ್ ಗೌಡಗೆ ಇರೀತಿ ಆಗಲು ಕಾರಣ ವೇನು ಗೊತ್ತೇ......?
#ದಾಖಲೆ ಇಲ್ಲದೆ ಇರುವುದು ಕಾನೂನುಬಾಹಿರ ಎಂದ ಅಧಿಕಾರಿಗಳು# ಕಾನೂನುಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ಆರೋಪದ ಉರುಳಿನಲ್ಲಿ ಸಿಲುಕಿರುವ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (28) ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (ಡಿಸಿಪಿಯು) ಕಾನೂನು ಪರಿವೀಕ್ಷಣಾ ಅಧಿಕಾರಿ ಜೆ. ಗೀತಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ಕೊಂಡು ಸೋನು ಶ್ರೀನಿವಾಸ್ ಗೌಡರನ್ನು ಪೊಲೀಸರು ಬಂಧಿಸಲಾಗಿದೆ. ಸೋನು ಜತೆಯಲ್ಲಿದ್ದ ಎಂಟು ವರ್ಷದ ಹೆಣ್ಣು ಮಗುವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದು ರಕ್ಷಣೆ ಒದಗಿಸಿದ್ದಾರೆ. ಸೋನು ವಿರುದ್ಧ ಬಾಲನ್ಯಾಯ ಕಾಯಿದೆ, ಮಾನವ ಕಳ್ಳಸಾಗಣೆ ಆರೋಪಗಳಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸೋನು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆ ಸಲುವಾಗಿ ಮಾ.25ರವರೆಗೆ ಕಸ್ಟಡಿಗೆ ಪಡೆದಿದ್ದಾರೆ. ಬಯಲಾಗಿದ್ದು ಹೇಗೆ?: ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವ ಸೋನು ಗೌಡ, ಹೆಣ್ಣು ಮಗುವಿನ ಜತೆ ಅಡುಗೆ ತಯಾರಿ, ಪ್ರವಾಸ ಸೇರಿದಂತೆ ಹಲವು ವಿಚಾರಗಳ ಕುರಿತು ವಿಡಿಯೊ ಮಾಡಿ ಅಪ್‌ಲೋಡ್ ಮಾಡುತ್ತಿದ್ದರು. ಈ ವಿಚಾರಕ್ಕೆ ನೆಟ್ಟಿಗರು ಮಗುವಿನ ಕುರಿತು ಪ್ರಶ್ನಿಸುತ್ತಿದ್ದರು. ಈ ಬೆನ್ನಲ್ಲೇ ಮಗುವಿನ ಜತೆ ಪುನಃ ವಿಡಿಯೊ ಮಾಡಿರುವ ಸೋನು, "ಮಗುವನ್ನು ದತ್ತು ಪಡೆದಿದ...