ಮಾ.1 ರಿಂದ ದ್ವಿತೀಯ ಪಿಯು 25ಕ್ಕೇ ಎಸೆಸೆಲ್ಸಿ ಪರೀಕ್ಷೆ ಶುರು

ಬೆಂಗಳೂರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾ.1ರಿಂದ ಮಾ.22ರವರೆಗೆ ದ್ವಿತೀಯ ಪಿಯುಸಿ ಮತ್ತು ಮಾ.25ರಿಂದ ಏ.6ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ.

ಮಂಡಳಿಯು ಈ ಹಿಂದೆ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಗಳಿಗೆ ಸಲ್ಲಿಕೆಯಾದ ಆಕ್ಷೇಪಗಳನ್ನು ಪರಿಗಣಿಸಿ, ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

#ದ್ವಿತೀಯ ಪಿಯು ಪರೀಕ್ಷೆ:
80 ಅಂಕಗಳಿಗೆ ನಡೆಯುವ ಲಿಖಿತ ಪರೀಕ್ಷೆ ಗಳಿಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 ರವರೆಗೆ ಸಮಯ ನಿಗದಿಪಡಿಸಲಾಗಿದೆ. ಮಾ.1- ಕನ್ನಡ, ಅರೇಬಿಕ್, ಮಾ4- ಗಣಿತ, ಶಿಕ್ಷಣಶಾಸ್ತ್ರ, ಮಾ 5-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 36- ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೇಳ್ವೆಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್, ಮಾ7- ಇತಿಹಾಸ, ಭೌತಶಾಸ್ತ್ರ ಮಾ9- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ ಗೃಹವಿಜ್ಞಾನ, ಮಾ11- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾ13- ಇಂಗ್ಲಿಷ್, ಮಾ15- ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ, ಮಾ16- ಅರ್ಥಶಾಸ್ತ್ರ ಮಾ 18- ಭೂಗೋಳಶಾಸ್ತ್ರ, ಜೀವಶಾಸ್ತ್ರ ಮಾ.20-ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ,ಮಾ21- ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾ22- ಹಿಂದಿ ಪರೀಕ್ಷೆಗಳು ನಡೆಯಲಿವೆ.
#ಎಸ್ಸೆಸ್ಸೆಲ್ಸಿ ಪರೀಕ್ಷೆ: 
ಮಾ25 ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಮಾ27- ಸಮಾಜ ವಿಜ್ಞಾನ, ಮಾ30- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂ ಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಏ2- ಗಣಿತ, ಸಮಾಜ ಶಾಸ್ತ್ರ, ಏ 3- ಅರ್ಥಶಾಸ್ತ್ರ ಮತ್ತು ಕೋರ್ ಸಪ್ಟೆಕ್ಟ್- ಎಲಿಮೆಂಟ್ಸ್ ಆಫ್ ಎಲೆಕ್ಟಿಕಲ್ ಎಂಜಿನಿಯರಿಂಗ್, ಮೆಕ್ಯಾ ನಿಕಲ್, ಎಲೆಕ್ಟಿಕಲ್-2, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್a - 4, ಗ್ರಾಫಿಕ್ಸ್-2, ಎಲೆಕ್ಟ್ರಾನಿಕ್ಸ್ -4, ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್, 24- ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್‌ ವಿಷಯಗಳು, ಏ 6- ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ ಪರೀಕ್ಷೆಗಳು ನಡೆಯಲಿವೆ. 


•|ವಿದ್ಯಾರ್ಥಿಗಳಿಗೆ ಮಾಹಿತಿ|•
#ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮಯ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1:30
# ಪ್ರಥಮ ಭಾಷೆಗೆ 100 ಅಂಕ
#ಉಳಿದ ವಿಷಯಗಳು 80 ಅಂಕ
#ಪ್ರಥಮ ಭಾಷೆ, ಐಚ್ಚಿಕ ವಿಷಯ ಪರೀಕ್ಷೆ 3 ಗಂಟೆ( ಪ್ರಶ್ನೆಪತ್ರಿಕೆ ಓದಲು 15 ನಿಮಿಷ)
# ದ್ವಿತೀಯ, ತೃತೀಯ ಭಾಷೆ ಪರೀಕ್ಷೆಗೆ 2 ಗಂಟೆ 45 ನಿಮಿಷ( ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ)
# ಅಂಧ, ಮೂಕ, ಕಿವುಡ ವಿದ್ಯಾರ್ಥಿ ಗಳಿಗೆ 3 ಗಂಟೆ (ಪ್ರಶ್ನೆ ಪತ್ರಿಕೆಗೆ ಉತ್ತರಿಸಲು 1 ಗಂಟೆ, 2 ಗಂಟೆಯ ಪ್ರಶ್ನೆ ಪತ್ರಿಕೆಗೆ ಉತ್ತರಿ ಸಲು 40 ನಿಮಿಷ ಹೆಚ್ಚುವರಿ ಸಮಯ)

Comments