ಪುಷ್ಪಕ್'ನಂಥ ಮರುಬಳಕೆ ನೌಕೆಗಳಿಂದ ಇಸ್ರೋಗೆ ಆಗುವ ಲಾಭಗಳು ಗೊತ್ತೇ...?

ಮರುಬಳಕೆ ಉಡ್ಡಯನ ವಾಹನವನ್ನು ಇಸ್ರೋ ಏಕೆ ನಿರ್ಮಿಸಿತು?

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಹೇಳುವಂತೆ, “ಬಾಹ್ಯಾಕಾಶ ಪ್ರವೇಶವನ್ನು ಕೈಗೆಟುಕುವಂತೆ ಮಾಡಲು ಭಾರತ ಇಟ್ಟಿರುವ ದಿಟ್ಟ ಹೆಜ್ಜೆ.” ಅಂದರೆ, ರಾಕೆಟ್‌ನ ಮೇಲಿನ ಹಂತ ಅತ್ಯಂತ ದುಬಾರಿ. ಸಾಮಾನ್ಯವಾಗಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಬಳಿಕ, ಇದು ಬಾಹ್ಯಾಕಾಶದಲ್ಲಿ ಅವಶೇಷವಾಗಿ ಉಳಿಯು ತ್ತದೆ. ಕೋಟ್ಯಂತರ ರೂ.ಗಳ ಎಲೆಕ್ಟ್ರಾನಿಕ್ ಭಾಗಗಳು ಇದರೊಂದಿಗೆ ಬಾಹ್ಯಾಕಾಶದಲ್ಲಿ ತ್ಯಾಜ್ಯವಾಗುತ್ತದೆ. ಅತ್ಯಲ್ಪ ಹಣದಲ್ಲಿ ಇಡೀ ಜಗತ್ತೇ ತಿರುಗಿ ನೋಡುವಂಥ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಂಡ ಇಸ್ರೋಗೆ ಮರುಬಳಕೆ ಉಡ್ಡಯನ ವಾಹನದ ಆವಿಷ್ಕಾರ ಅತ್ಯವಶ್ಯಕವಾಗಿತ್ತು.

ಈ ಬಗ್ಗೆ ವ್ಯಾಪಕ ಸಂಶೋಧನೆ ಕೈಗೊಂಡ ಬಳಿಕ 2016ರಲ್ಲಿ ಪುಷ್ಪಕ್ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಿತ್ತು. ರಾಕೆಟ್‌ನಲ್ಲಿ ಅಳವಡಿಸಿ ಇದನ್ನು ಬಾಹ್ಯಾಕಾಶಕ್ಕೆ ಬಿಡಲಾಯಿತು. 6.5 ಮೀಟರ್ ಉದ್ದದ ಈ ಬಾಹ್ಯಾಕಾಶ ನೌಕೆಯ ತೂಕ 1.75 ಟನ್. ಹೈಪರ್‌ಸಾನಿಕ್ ವೇಗದಲ್ಲಿ ಸುಮಾರು 65 ಕಿ.ಮೀ. ಪಯಣಿಸಿದ ಬಳಿಕ 180 ಡಿಗ್ರಿಯಲ್ಲಿ ತಿರುಗಿ ಹಿಂತಿರುಗಿ, ಬಂಗಾಳ ಕೊಲ್ಲಿಯಲ್ಲಿ ಇಳಿಸಲಾಗಿತ್ತು. ಈಗ ಸುಧಾರಿತ 'ಪುಷ್ಪಕ್' ಇಸ್ರೋಗೆ ಧೈರ್ಯ ಹೇಳಿದೆ.

# ಇಸ್ರೋದ ಮುಂದೆ ಈಗ 'ಗಗನಯಾನ'ದ ಮಹತ್ವಾಕಾಂಕ್ಷೆ ಯೋಜನೆಯಿದೆ.
# 2036ರಲ್ಲಿ ಭಾರತ ತನ್ನದೇ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಬೃಹತ್ ಕನಸಿಟ್ಟುಕೊಂಡಿದೆ.

# ಗಗನಯಾತ್ರಿಗಳ ಓಡಾಟದ ವೆಚ್ಚ ತಗ್ಗಿಸಲು 'ಪುಷ್ಪಕ್' ನೆರವಾಗಲಿದೆ.

@ಉಪಗ್ರಹ ಉಡಾವಣೆ ವೆಚ್ಚ 10 ಪಟ್ಟು ಕಡಿಮೆಯಾಗಲಿದೆ!@

@ಪುಷ್ಪಕ್'ನಂಥ ಮರುಬಳಕೆ ನೌಕೆಗಳಿಂದ ಇಸ್ರೋಗೆ ಆಗುವ ಲಾಭಗಳು ಹಲವು. ಅವುಗಳೆಂದರೆ...@

 01=ಆರ್‌ಎಲ್‌ವಿ ನೌಕೆಯಿಂದ ಉಪಗ್ರಹ ಉಡಾವಣೆ ವೆಚ್ಚ 10 ಪಟ್ಟು ಕಡಿಮೆಯಾಗಲಿದೆ ಎಂದು 'ನಿರೀಕ್ಷಿಸಲಾಗಿದೆ. ಉಪಗ್ರಹಗಳನ್ನು ಕಕ್ಷೆಗೆ ಬಿಟ್ಟು ನೌಕೆ ಹಿಂತಿರುಗುತ್ತದೆ. ತುಸು ನಿರ್ವಹಣೆಯ ನಂತರ, ಅದನ್ನು ಮತ್ತೆ ಬಳಸಿ, ಉಪಗ್ರಹ ಉಡಾವಣೆ ಮಾಡಬಹುದಾಗಿದೆ. ಪ್ರಸ್ತುತ, ಸಾಮಾನ್ಯ ರಾಕೆಟ್‌ನಲ್ಲಿ 1 ಕೆಜಿ ಸ್ಯಾಟಲೈಟ್ ಪೇಲೋಡನ್ನು ಕಕ್ಷೆಗೆ ಕೂರಿಸಲು ತಗುಲುತ್ತಿರುವ ವೆಚ್ಚ ಕನಿಷ್ಠ 4.17 ಲಕ್ಷ ರೂಪಾಯಿ. ಮರು ಬಳಸಲ್ಪಡುವ ರಾಕೆಟ್‌ನಲ್ಲಿ 1 ಕೆಜಿ ಸ್ಯಾಟಲೈಟ್ ಪೇಲೋಡ್‌ಗೆ ತಗುಲುವ ವೆಚ್ಚ ಸುಮಾರು 41,717 ರೂಪಾಯಿ! ಸಾಮಾನ್ಯವಾಗಿ ಒಂದೊಂದು ಸ್ಯಾಟಲೈಟ್‌ಗಳು ಬೇರೆಬೇರೆ ಗಾತ್ರಗಳಲ್ಲಿ ಹತ್ತಾರು, ನೂರಾರು, ಸಾವಿರಾರು ಕೆಜಿಗಳಲ್ಲಿರುತ್ತವೆ.

02=ಮರುಬಳಕೆ ಉಡ್ಡಯನ ವಾಹನವು ಇಸ್ರೋದ ಗಗನಯಾತ್ರಿಗಳಿಗೆ ಕಡಿಮೆ ವೆಚ್ಚದ ಬಾಹ್ಯಾಕಾಶ ಪ್ರವೇಶಕ್ಕೂ ಅನುಕೂಲ ಕಲ್ಪಿಸಲಿದೆ. ಅದರಲ್ಲೂ 'ಪುಷ್ಪಕ್'ನ ಇತ್ತೀಚಿನ ಹಾಗೂ ಮುಂದಿನ ಆವೃತ್ತಿಗಳೊಂದಿಗೆ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಸುಲಭವೇ ಆಗಲಿದೆ.

03=ಕಕ್ಷೆಯಲ್ಲಿ ಹಾನಿಗೊಳಗಾದ ಉಪಗ್ರಹಗಳನ್ನು ಈ ನಾಶಪಡಿಸುವ ಬದಲು, ಸರಿಪಡಿಸಲು ಸಾಕಷ್ಟು ಅವಕಾಶಗಳನ್ನು 'ಪುಷ್ಪಕ್' ಒದಗಿಸಿಕೊಡಲಿದೆ. ಬಾಹ್ಯಾಕಾಶ ತ್ಯಾಜ್ಯ ತಪ್ಪಿಸುವುದು ಇಸ್ರೋದ ಮುಖ್ಯ ಉದ್ದೇಶವಾಗಿದೆ.

04=ಚೀನಾ, ಅಮೆರಿಕ, ರಷ್ಯಾದಂಥ ರಾಷ್ಟ್ರಗಳು ಮರುಬಳಕೆಯಾಗುವ ಉಡ್ಡಯನ ವಾಹನಗಳನ್ನು ಬಳಸಿಕೊಂಡು ಶತ್ರು ರಾಷ್ಟ್ರಗಳ ಉಪಗ್ರಹವನ್ನು ಹ್ಯಾಕ್ ಮಾಡುವ, ನಾಶಪಡಿಸುವ ಪ್ರಯತ್ನಗಳಿಗೂ ಕೈಹಾಕಲು ಯೋಚಿಸುತ್ತಿವೆ. ನಿರ್ಣಾಯಕ ಸಂದರ್ಭದಲ್ಲಿ ಭಾರತೀಯ ಸೇನೆಗೂ 'ಪುಷ್ಪಕ್'ನ ತಂತ್ರಜ್ಞಾನದಿಂದ ಅನುಕೂಲವೇ ಆಗಲಿದೆ.

05='ಪುಷ್ಪಕ್' ಇನ್ನಷ್ಟು ಸುಧಾರಣೆಗೊಂಡ ಬಳಿಕ 10,000 ಕೆಜಿಗಿಂತ ಹೆಚ್ಚು ಪೇಲೋಡ್ ಅನ್ನು ಭೂ ಕಕ್ಷೆಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಬಹುದು. ಪ್ರಸ್ತುತ ಇಸ್ರೋ 2022ರಲ್ಲಿ ಎಲ್‌ವಿಎಂ3 - ಎಂ2 ರಾಕೆಟ್ ಮೂಲಕ 5,796 ಕಿಲೋ ಗರಿಷ್ಠ ತೂಕದ 36 ಒನ್‌ವೆಬ್ ಸ್ಯಾಟ್‌ ಲೈಟ್‌ ಗಳನ್ನು ಕಕ್ಷೆಗೆ ಸೇರಿಸಿದ್ದ ದಾಖಲೆ ಹೊಂದಿದೆ.

Comments