ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ 12TH ಫೇಲ್ ಪ್ರೇರಣೆ

ವಿಧು ವಿನೋದ್ ಚೋಪ್ರಾ ನಿರ್ದೇಶನದ ಹಾಗೂ ವಿಕ್ರಾಂತ್ ಮೆಸ್ಸಿ ನಾಯಕರಾಗಿ ನಟಿಸಿರುವ '12TH ಫೇಲ್' ಸಿನಿಮಾ ಈಗ ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. 12ನೇ ತರಗತಿಯಲ್ಲಿ ಫೇಲಾದ ಹುಡುಗನೊಬ್ಬ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆ ಬರೆದು ಭಾರತೀಯ ಪೊಲೀಸ್ ಸೇವೆಗೆ ಸೇರುವ ಕತೆ ಹೊಂದಿರುವ ಈ ಚಿತ್ರ ಕೇವಲ ಸಿನಿಮವಾಗಿ అల్ల, ವಿದ್ಯಾರ್ಥಿಗಳ ಓದಿಗೆ ಸ್ಫೂರ್ತಿಯಾಗಿ ಸೆಳೆಯುತ್ತಿದೆ. ಸಾಧನೆಯ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಿ ಎಂಬ ಮಾತು ಕೇಳಿ ಬರುತ್ತಿದೆ. ಓಟಿಟಿಯಲ್ಲಿ ತೆರೆಕಂಡ ಬಳಿಕ ಬಹು ಜನಪ್ರಿಯತೆ ಗಳಿಸುತ್ತಿರುವ ಈ ಚಿತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಮುಗಿಬಿದ್ದು ನೋಡುತ್ತಿದ್ದಾರೆ. ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳೂ ಚಿತ್ರವನ್ನು ವೀಕ್ಷಿಸಲು ಅಭ್ಯರ್ಥಿಗಳಿಗೆ ಸೂಚಿಸುತ್ತಿವೆ.

ಜೀವನದಲ್ಲಿ ಸೋತಾಗ ಮಾಡಬೇಕಾಗಿರುವುದು Restart. ಅದನ್ನೇ ಹಿರಿಯರು 'ಮರಳಿ ಯತ್ನವ ಮಾಡು' ಎಂದರು. ಇಂಥ Restartಗಳ ಹಿಂದೆ ಬಿದ್ದ ಯುವಕನೊಬ್ಬನ ಕತೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟ ಚಿತ್ರವೇ '12TH ಫೇಲ್'.
ಚಿತ್ರದ ನಾಯಕ ಮನೋಜ್ ಕುಮಾರ್ ಶರ್ಮ ಚಂಬಲ್ ಎಂಬ ಊರಿನ ಯುವಕ. ಕಡುಬಡತನದ * ಕುಟುಂಬ. ಭ್ರಷ್ಟರೇ ತುಂಬಿರುವ ಈ ಊರಿನಲ್ಲಿ ಮನೋಜ್ ತಂದೆಯೂ ಕೆಲಸ ಕಳೆದುಕೊಳ್ಳುವುದು ಭ್ರಷ್ಟಾಚಾರದಿಂದಾಗಿ, ಇತ್ತ ಮನೋಜ್ 12ನೇ ತರಗತಿಯಲ್ಲಿ ಫೇಲಾಗಲು ಕಾರಣ ಇದೇ ಭ್ರಷ್ಟಾಚಾರ. ಅದೇ ಸಮಯದಲ್ಲಿ ಚಂಬಲ್‌ ಗೆ ವರ್ಗಾವಣೆಗೊಂಡು ಬಂದ ಡಿಎಸ್‌ಪಿ ದುಶ್ಯಂತ್ ಸಿಂಗ್ ಮನೋಜ್‌ ಗೆ ಪ್ರೇರಣೆಯಾಗುತ್ತಾರೆ. ಅವರಂತೆ ಪೊಲೀಸ್ ಆಗಬೇಕೆಂಬ ಕನಸು ಹೊತ್ತ ಮನೋಜ್ ಗೆಳೆಯರೊಬ್ಬರ ಈ ನೆರವಿನಿಂದ ಕೋಚಿಂಗ್‌ಗೆ ದಿಲ್ಲಿಗೆ ಬಂದರೆ ಅಲ್ಲಿಮನೋಜ್‌ ಕುಮಾ‌ರ್ ಬದುಕಿನ ಹೊಸದೊಂದು ಅಧ್ಯಾಯ ಆರಂಭ. ರಾತ್ರಿ ಹಗಲೆನ್ನದೆ ದುಡಿಮೆ ಜೊತೆಗೆ ಓದು ಕೂಡ. ಈ ನಡುವೆ ಮನೋಜ್‌ಗೆ ಗೌರಿ ಭಯ್ಯಾ ಪರಿಚಯ. ನಾಗರಿಕ ಸೇವಾ ಪರೀಕ್ಷೆಗೆ ಪ್ರಯತ್ನಿಸಿ ಯಶಸ್ಸು ಗಳಿಸಲು ಸಾಧ್ಯವಾಗದ ಗೌರಿ ಭಯ್ಯಾ ತರಬೇತಿ ಕೇಂದ್ರವನ್ನು ಆರಂಭಿಸಿ ತನ್ನದೇ ಸ್ಫೂರ್ತಿಯ ಕತೆಗಳನ್ನು ಹೇಳಿ ಹುರಿದುಂಬಿಸುತ್ತಿದ್ದರು. ಪದೇಪದೆ ಫೇಲಾದ ಮನೋಜ್ ಅಂತಿಮವಾಗಿ ನಾಲ್ಕನೇ ಪ್ರಯತ್ನದಲ್ಲಿ ಗೆಲ್ಲುತ್ತಾರೆ. ತನಗೆ ಸ್ಫೂರ್ತಿಯಾದ ಅದೇ ದುಶ್ಯಂತ್ ಸಿಂಗ್ ಎದುರು ಖಾಕಿ ದಿರಸಿನಲ್ಲಿ ಬಂದು ಸೆಲ್ಯೂಟ್ ಹೊಡೆದು, ಕೊಟ್ಟ ಮಾತಿನಂತೆ ಐಪಿಎಸ್ ದಿರಿಸಿನಲ್ಲಿ ತನ್ನೂರಿಗೆ ಬಂದು ತಮ್ಮ ಕುಟುಂಬದವರನ್ನೂ ಎದುರುಗೊಳ್ಳುತ್ತಾರೆ. ಮನೋಜ್‌ಕುಮಾರ್‌ಗೆ ಐಪಿಎಸ್ ಅಧಿಕಾರಿಯಾಗಬೆನ್ನುವ ತುಡಿತ, ಅನುಭವಿಸಿರುವ ಕಷ್ಟ, ಮಾನಸಿಕ ಯಾತನೆ, ಹೊಟ್ಟೆಗೆ ತುತ್ತಿಲ್ಲದೆ ಕಳೆದ ದಿನಗಳು, ಗೆಳತಿ ಶ್ರದ್ಧಾ ಭೇಟಿ ಎಲ್ಲವೂ ಸಿನಿಮಾದಲ್ಲಿವೆ. ಜೀವನದಲ್ಲಿ ಸೋಲು ಸಹಜ, ಆದರೆ, ಮರಳಿ ಪ್ರಯತ್ನವ ಮಾಡಿದರೆ ಸೋಲನ್ನೇ ಸೋಲಿಸಿ ಯಶಸ್ಸು ಗಳಿಸುವ ಅಮೂಲ್ಯ ಘಳಿಗೆ ನಮ್ಮದಾಗಬಹುದು ಎನ್ನುವ ಸ್ಫೂರ್ತಿ ಚಿತ್ರದಲ್ಲಿದೆ. 
•∆•ಒಟಿಟಿಗೆ ಬಂದ ಮೇಲೂ ಕೋಟಿ ರೂ. ಕಲೆಕ್ಷನ್:
12 TH ಫೇಲ್ ಸಿನಿಮಾವನ್ನು ಸಾಮಾನ್ಯ ಜನರ . ಜತೆಗೆ ಸೆಲೆಬ್ರಿಟಿಗಳ ಸಹ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಒಟಿಟಿಗೆ ಬಂದ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಈಗಲೂ ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಒಟಿಟಿಯಲ್ಲಿ ತೆರೆಕಂಡ ನಂತರ ಈ ಸಿನಿಮಾ ಅಂದಾಜು ಒಂದೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

•|ರಿಯಲ್ ಹೀರೊ|• ಈ ಚಿತ್ರವು 2005ನೇ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧರಿತ ಚಿತ್ರ. ಮನೋಜ್ ಕುಮಾರ್ ಶರ್ಮಾ ಅವರು ಈಗ ಮುಂಬಯಿ ಅಡಿಷನಲ್‌ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆತೆಗೆದುಕೊಳ್ಳುವ ಬಹುತೇಕ ಅಭ್ಯರ್ಥಿಗಳಿಗೆ ಪರೀಕ್ಷೆ ಕಷ್ಟ ಎನ್ನುವ ಭಾವನೆಯಿರುತ್ತದೆ.
ಅಂಥವರಿಗೆ ಆತ್ಮವಿಶ್ವಾಸ ತುಂಬುವುದು ಮಾತ್ರವಲ್ಲ, ಕಡುಬಡತನದಿಂದ ಬಂದರೂ ತಾನು ಯುಪಿಎಸ್‌ಸಿ ನಡೆಸುವ ಪ್ರತಿಷ್ಠಿತ ಪರೀಕ್ಷೆಯಲ್ಲಿ ಗೆಲ್ಲಬಹುದು ಎನ್ನುವ ಪ್ರೇರಣಾದಾಯಕ ಅಂಶ ಈ ಚಿತ್ರದಲ್ಲಿದೆ.

           | ಡಾ. ಶಿವಕುಮಾರ್ |
(ಐಎಎಸ್ ಅಕಾಡೆಮಿಯೊಂದರ ನಿರ್ದೇಶಕರು)


Teligram chanl
https://t.me/brandMbrdra

Comments