ಸಂತಸದ, ಸಾಂತನದ ಬೆಳಕಾಗಲಿ ರಾಮ ಜ.22ರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ರಾಜಕೀಯೇತರ ಉತ್ಸವವಾಗಲಿ

ಮಹಾತ್ಮನಿಗೆ ಪತ್ರ
ಚೀ. ಜ. ರಾಜೀವ

#ಪ್ರಿಯ ಬಾಪು,
ಇಲ್ಲೀಗ ರಾಮನ ಕುರಿತೇ ಎಲ್ಲೆಲ್ಲೂ ಮಾತುಕತೆ, ಚರ್ಚೆ, ಸಡಗರ ಸಂಭ್ರಮ. ಇದೇ 2024ನೇ ಜನವರಿ 22ರಂದು, ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಉದ್ಘಾಟನೆ. 'ಮಂದಿರ್ ವಹಿ ಬನಾಯೇಂಗೆ' ಎಂದು ಈ ದೇಶದಲ್ಲಿ ದೊಡ್ಡ ಚಳವಳಿಯನ್ನೇ ನಡೆಸಿದ ಸಂಘ-ಪರಿವಾರದ ಹರ್ಷ ಮುಗಿಲು ಮುಟ್ಟಿದೆ. "ಎಲ್ಲರೂ ಅಯೋಧ್ಯೆಗೆ ಬನ್ನಿ, ರಾಮನ ದರ್ಶನ ಮಾಡಿ ...," ಎಂದು ದೇಶದ ತುಂಬೆಲ್ಲಾ ಮನೆಮನೆಗೆ ಅಕ್ಷತೆ ನೀಡಿ ಆಹ್ವಾನಿಸುತ್ತಿರುವ ರಾಮಭಕುತರ ಸಂತೋಷಕ್ಕೆ ಪಾರವೇ ಇಲ್ಲ. ಇದಕ್ಕೆ ಪೂರಕವಾಗಿ ಈ ನಾಡಿನ ಸಾಧು ಸಂತರು, ವಿವಿಧ ಕ್ಷೇತ್ರದ ಸಾಧಕ ವಿಐಪಿಗಳು ಕೂಡ, ಅಯೋಧ್ಯೆಗೆ ಹೋಗಲು ತಮಗೂ ಕರೆಯೋಲೆ ಬಂದಿದೆ ಎಂದು ಸಂತೋಷದ ಚಿತ್ರಪಟಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಂದಿರ ಉದ್ಘಾಟನೆಯ ದಿನ ಎಲ್ಲ ರಾಮಮಂದಿರಗಳಲ್ಲೂ ವಿಶೇಷ ಪೂಜೆ ಪುನಸ್ಕಾರ ನಡೆಯಲಿದೆ ಎಂದು ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕ ಸರಕಾರವೂ ಸುತ್ತೋಲೆಯನ್ನೇ ಹೊರಡಿಸಿದೆ. ಸಾಮರಸ್ಯ ಬಯಸುವ ಮುಸ್ಲಿಮರು ಕೂಡ, ಎಲ್ಲ ಕಹಿಯನ್ನು ಮರೆತು ರಾಮನಾಮ ಸ್ಮರಣೆಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ರಾಮನಗರದ ಶಾಸಕ ಇಟ್ಬಾಲ್ ಹುಸೇನ್ ನಾನೂ ರಾಮಭಕ್ತ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಒಟ್ಟಾರೆ ಇಲ್ಲೀಗ ರಾಮನದ್ದೇ ಧ್ಯಾನ. ನಿಜ, ಈ ದೇಶ ಕಂಡ ಮಹಾನ್ ಚಿಂತಕ, ಸಮಾಜವಾದಿ ರಾಮ ಮನೋಹರ ಲೋಹಿಯಾ ಹೇಳುವಂತೆ, "ರಾಮ, ಕೃಷ್ಣಮತ್ತು ಶಿವ- ಈ ಮೂವರು ಭಾರತೀಯರ ಪೂರ್ಣತ್ವದ ಮಹಾಕನಸುಗಳು,'' ಜನರ ಪಾಲಿಗೆ ರಾಮನ ವ್ಯಕ್ತಿತ್ವವಂತೂ ಆದರ್ಶದ ಮೇರುಪರ್ವತ. ಆತ ಅಪ್ಪ-ಅಮ್ಮನ ಮಾತು ಕೇಳುವ ಒಳ್ಳೆಯ ಮಗ, ಗುರುವಿಗೆ ಉತ್ತಮ ಶಿಷ್ಯ, ಸೋದರರ ನಂಬುಗೆಯ ಅಗ್ರಜ, ಸ್ನೇಹಿತರ ಪಾಲಿಗೆ ಪ್ರಾಣ ಮಿತ್ರ, ಪರಸ್ತ್ರೀಯರ ನೆರಳನ್ನೂ ಸೋಂಕಿಸಿಕೊಳ್ಳದ ಪತಿ, ಅಸಹಾಯಕರ ನೆರವಿಗೆ ಧಾವಿಸುವ ಆಪದ್ಭಾಂಧವ, ದ್ವೇಷವಿಲ್ಲದೇ ಶತ್ರುವನ್ನು ಮಣಿಸುವ ವೀರ, ಶ್ರೀಸಾಮಾನ್ಯರ ಮಾತಿಗೂ ಕಿವಿಗೊಡುವ ಪ್ರಭು, ಎಲ್ಲರಿಗೂ ತ್ವರಿತ ನ್ಯಾಯ ನೀಡುವ ಪ್ರಜಾ ರಕ್ಷಕ- ಹೀಗೆ ರಾಮನ ಆದರ್ಶಗಳಿಗೆ ಗು ಎಣೆಯಿಲ್ಲ. ಮರ್ಯಾದೆಗೆ ಮತ್ತೊಂದು ಹೆಸರೇ ರಾಮ. ಹಾಗಾಗಿಯೇ ಇಲ್ಲಿಯ ಜನ ರಾಮನಂಥ ಮಕ್ಕಳು ಹುಟ್ಟಲಿ ಕಾ ಎಂದು ಬಯಸಿ, ಹುಟ್ಟಿದ ಮಗುವಿಗೆ ರಾಮ ಎಂದು ಹೆಸರಿಡುತ್ತಾರೆ. ಈ ಎಲ್ಲ ಕಾರಣದಿಂದಲೇ ಇರಬೇಕು, ರಾ ಲೋಕ ಹೇಗಿರಬೇಕು ಎಂದರೆ ರಾಮರಾಜ್ಯದಂತಿರಬೇಕು ಎಂಬ ನಾಣ್ಣುಡಿ ಚಾಲ್ತಿಗೆ ಬಂದಿರಬೇಕು. ಪ್ರತಿ 25 ಕಿ. ಮೀ. ದ ದೂರಕ್ಕೂ ವೈವಿಧ್ಯಮಯವಾದ ವೇಷ-ಭೂಷಣ, ಸ ಭಾಷೆ-ಸಂಸ್ಕೃತಿ ಹೊಂದಿರುವ ಈ ನೆಲದಲ್ಲಿ, ಪ್ರತಿ 50 ಕಿ.ಮೀ. ಅಂತರದಲ್ಲಿ ಸಿಗುವ ಸಾಮಾನ್ಯ ದೇಗುಲ ರಾಮ-ಆಂಜನೇಯರದ್ದೇ ಆಗಿರುತ್ತದೆ. ಈ ಅರ್ಥದಲ್ಲಿ ಕ ರಾಮ ಭಾರತವನ್ನು ಬೆಸೆದಿದ್ದಾನೆ, ಒಗ್ಗೂಡಿಸಿದ್ದಾನೆ.
#ಪ್ರಿಯ ಬಾಪು,
 ರಾಮನ ಕುರಿತ ಈ ಎಲ್ಲ ಅಭಿಪ್ರಾಯಗಳು ಈ ನೆಲದ ಭಾವಮಿಡಿತದ ಸಂಗತಿಗಳು. ದೇವರಾಗಿ, ಪುರಾಣದ ಆದರ್ಶ ಪುರುಷನನ್ನಾಗಿ ರಾಮನನ್ನು ಹೀಗೆ ಪರಿಭಾವಿಸುವುದು, ನಂಬುವುದು- ಎರಡೂ ಸರಿ. ಆದರೆ,ನೀನು ಈ ಭಾವಪ್ರಪಂಚದಿಂದಾಚೆಗೂ ನಿಂತು, ರಾಮನನ್ನು ನೋಡಿರುವೆ. ರಘುಪತಿ ರಾಘವ ರಾಜಾರಾಮ್ ನಿನ್ನ ಉಸಿರೇ ಆಗಿದ್ದ. 1929ರಲ್ಲಿ 'ಯಂಗ್ ಇಂಡಿಯಾ' ಪತ್ರಿಕೆಗೆ ಬರೆದ ಲೇಖನದಲ್ಲಿ, ನಂತರದ ನಿನ್ನಮಾತುಕತೆಗಳಲ್ಲಿ ದೊರೆಯುವ ರಾಮನಂತೂ ಹೊಸ ಎತ್ತರದಲ್ಲಿ ನಿಲ್ಲುತ್ತಾನೆ. ''ರಾಮ ನನ್ನ ರಕ್ಷಕ. ರಾಮರಾಜ್ಯವೆಂದರೆ ಹಿಂದೂ ರಾಜ್ಯವೆಂಬುದು ನನ್ನ ಅಭಿಪ್ರಾಯವಲ್ಲ, ಅದೊಂದು ದೈವ ಬೆಂಬಲದ ಕಲ್ಯಾಣ ಸಾಮ್ರಾಜ್ಯ.ರಾಜನಾದವ ಜನರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಾನೆ. ಶತ್ರುವಿನ ಜತೆಯಲ್ಲೂ ಆತ ನ್ಯಾಯದಿಂದ ನಡೆದುಕೊಳ್ಳುತ್ತಾನೆ.

ಎಲ್ಲರನ್ನೂ ತನ್ನವರು ಎಂದು ಒಳಗೊಳ್ಳುತ್ತಾನೆ...," ಎಂದು ರಾಮರಾಜ್ಯದ ಕಲ್ಪನೆಗೆ ಹೊಸ ಅರ್ಥವನ್ನೇ ನೀಡಿರುವೆ. ನಿಜಕ್ಕೂ ಈ ದೇಶ ಅಂತಿಮವಾಗಿ ತಲುಪಬೇಕಿರುವ ಗುರಿಯದು. ಆದರೆ, ಇಂತಹ ಗುರಿ ತಲುಪುವ ಯಾವ ಲಕ್ಷಣವೂ ಸದ್ಯಕ್ಕೆ ನಮ್ಮನ್ನು ಆಳುತ್ತಿರುವ ಮಂದಿಯಲ್ಲಿ ಕಾಣುತ್ತಿಲ್ಲ. ಇದುವರೆಗೂ ಆಳಿದ ಮಂದಿಯಲ್ಲೂ ಅದಿರಲಿಲ್ಲ, ಈಗ ಕಾಣುತ್ತಿರುವುದೆಲ್ಲಾ ರಾಮನ ಹೆಸರಿನ ರಾಜಕೀಯ.

ಆ ಪಕ್ಷ, ಈ ಪಕ್ಷ ಎನ್ನದೇ ಬಹುತೇಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಕೂಡ, ತಮ್ಮ ತಮ್ಮ ಶಕ್ತಾನುಸಾರ, ಸ್ವಾರ್ಥಾನುಸಾರ, ಸಮಯಾನುಸಾರ ರಾಜಕೀಯ ಮಾಡುತ್ತಲೇ ಇವೆ. ರಾಮ ಜನ್ಮಭೂಮಿ ಹೋರಾಟದ, ರೂವಾರಿಯಾದ ಸಂಘ-ಪರಿವಾರ, ಕಾರ್ಯಕ್ರಮವನ್ನು 'ತನ್ನದೇ' ಎಂದು ವಿಪರೀತವಾಗಿ ಬಿಂಬಿಸಿಕೊಳ್ಳುತ್ತಿರುವ ಪರಿಣಾಮ, ಇಲ್ಲಿನ ಕಾಂಗ್ರೆಸ್ ಮುಖಂಡರು ಜ.22ರಂದು ತಾವು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ತೆರಳುವುದಿಲ್ಲ ಎಂದು ಘೋಷಿಸಿದ್ದಾರೆ. 1992ರ ಮಸೀದಿ ಧ್ವಂಸದ ಕಹಿ ನೆನಪನ್ನು ಮರೆಯಲು ಬಯಸದ ಪಕ್ಷಗಳು ಕೂಡ ಉತ್ಸವದಿಂದ ದೂರವೇ ಉಳಿದಿವೆ. ಈ ದೇಶದ ಜಾತ್ಯತೀತ ಸೊಬಗಿಗೆ ಬೆಂಕಿ ಬಿದ್ದ ದಿನವನ್ನು ಮರೆಯಲಾದೀತೆ ಎಂಬುದು ಆ ಪಕ್ಷಗಳ ಆಕ್ರೋಶ. ಅದೊಂದು ದುಃಖದಾಯಕ ದಿನ ಎಂಬ ಎಲ್. ಕೆ ಆಡ್ವಾಣಿ ಅವರ ಮಾತಿನಲ್ಲೂ ಅದನ್ನು ಗುರುತಿಸಬಹುದು. 
#ಪ್ರಿಯ ಬಾಪು,
ರಾಮ ಜನ್ಮಭೂಮಿ ಹೋರಾಟಕ್ಕೆ ಸಂಬಂಧಿಸಿದಂತೆ ನಡೆದುಹೋದ ಇಂಥಾ ತಪ್ಪು-ಒಪ್ಪುಗಳು ಏನೇ ಇರಲಿ, ದೇಶ ಎಲ್ಲವನ್ನೂ ಮರೆತು ಸರಿಯಾದ ದಾರಿಯಲ್ಲಿ ಮುಂದಕ್ಕೆ ಸಾಗಲೇಬೇಕಿದೆ. ತಪ್ಪೋ ಸರಿಯೋ ಗೊತ್ತಿಲ್ಲ, ಈ ದೇಶದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳೇ ಸೋಮನಾಥಪುರದ ದೇವಾಲಯಕ್ಕೆ ಭೇಟಿ ನೀಡಿ, ಧರ್ಮೋಲ್ಲಾಸದಿಂದ ದೇವರ ಧ್ಯಾನದಲ್ಲಿ ಮುಳುಗುತ್ತಾರೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಬಾರದು ಎಂದು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದ ಮುಸ್ಲಿಮರೇ ರಾಮನಿಗೆ ಜಯವಾಗಲಿ ಎನ್ನುತ್ತಿದ್ದಾರೆ. ಸೋಮನಾಥಪುರ, ವಾರಾಣಸಿ ಸೇರಿದಂತೆ ಎಲ್ಲ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿತ್ಯವೂ ಲಕ್ಷಲಕ್ಷ ಯುವ ಭಾರತೀಯರು ಪೂಜೆಗೈಯುತ್ತಿದ್ದಾರೆ. ಇದೆಲ್ಲವೂ ಭಾರತೀಯ ಸಮಾಜದ ಪುನರುತ್ಥಾನದ ಲಕ್ಷಣ ಎನ್ನುತ್ತಾರೆ ವಿದ್ವಾಂಸರು. ರಾಮಮಂದಿರ ವಿರೋಧಿಸುತ್ತಿರುವ ಮನಸ್ಸುಗಳು ಯೋಚಿಸಲೇಬೇಕು. ಹಾಗೆ ನೋಡಿದರೆ, ರಾಮನಿಗೆ ಅಯೋಧ್ಯೆಯಲ್ಲಿ ಒಂದು ಮಂದಿರ ನಿರ್ಮಾಣವಾಗಬೇಕು ಎಂಬುದು ಹಿಂದೂ ಸಮುದಾಯದ ಬಹುತೇಕರ ಕನಸು. ಸಂಘ ಪರಿವಾರ ಈ ಹೋರಾಟಕ್ಕೆ ಧುಮುಕುವ ಮುನ್ನವೇ ಗುಲ್ಟಾರಿಲಾಲ್ ನಂದ್ ಅವರಂಥ ಕೆಲವು ಕಾಂಗ್ರೆಸ್ ಮುಖಂಡರು ಈ ಹೋರಾಟಕ್ಕೆ ಪೀಠಿಕೆ ಹಾಕಿದ್ದರು. ಅದಕ್ಕೆ ನೀರೆರೆದ್ದು ಕಾಂಗ್ರೆಸ್ಸಿನ ರಾಜೀವ್ ಗಾಂಧಿ. ಬಳಿಕವಷ್ಟೇ ವಿಶ್ವ ಹಿಂದೂ ಪರಿಷತ್, ಬಿಜೆಪಿ ಹೋರಾಟಕ್ಕಿಳಿದಿದ್ದು. ಈ ಅರ್ಥದಲ್ಲಿ ನೋಡಿದರೆ, ಈ ಹೋರಾಟ ಯಾರೊಬ್ಬರ ಗೆಲುವೂ ಅಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಹಾಡಿದ್ದು ಸುಪ್ರೀಂ ಕೋರ್ಟ್. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿ ಎಂಬ ನ್ಯಾಯಾಲಯದ ತೀರ್ಪಿನ ಅನುಸಾರವೇ, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಲ್ಲೊಂದು ಮಂದಿರ ನಿರ್ಮಿಸಿದೆ. ಈ ಟ್ರಸ್ಟಿಗೆ ರಾಜಕೀಯ ಸೋಂಕು ಇರುವುದು ಬೇಡ, ಅದು ಪಕ್ಷಾತೀತವಾಗಿರಲಿ ಎಂದು ಘನ ನ್ಯಾಯಾಲಯವೇ ಹೇಳಿದೆ. ಹಾಗಾಗಿ ಜ.22ರ ಕಾರ್ಯಕ್ರಮ ಪಕ್ಷಾತೀತವಾದ ಉತ್ಸವ. ಅದನ್ನು ತಮ್ಮ ಪಕ್ಷದ ಕಾರ್ಯಕ್ರಮ ಎಂದು ಆಡಳಿತಾರೂಢ ಬಿಜೆಪಿ ಬಿಂಬಿಸಿಕೊಳ್ಳುವುದು ಸರಿಯಲ್ಲ, ಇದೇ ಕಾರಣಕ್ಕೆ ನಾವು ಉದ್ಘಾಟನೆಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಮತ್ತಿತರ ಪಕ್ಷಗಳು ಹೇಳುವುದಂತೂ ಬುದ್ದಿವಂತಿಕೆಯ ಲಕ್ಷಣವಲ್ಲ. ಭಾರತೀಯರ ಆದರ್ಶದಲ್ಲಿ ಒಡಮೂಡಿರುವ ರಾಮ ಈ ದೇಶದ ಏಕತೆಯ ಸಂಕೇತ, ಹಾಗಾಗಿ, ಆತನ ಹೆಸರಿನಲ್ಲಿ ದೇಶ ಒಗ್ಗೂಡಿಸುವ ಕೆಲಸ ನಡೆಯಬೇಕಿದೆ. ಸಮಾಜದಲ್ಲಿರುವ ಧ್ರುವೀಕರಣವನ್ನು ಹೋಗಲಾಡಿಸಿ ಏಕತೆಯನ್ನು ಗಟ್ಟಿಗೊಳಿಸಬೇಕಿದೆ. ರಾಮನ ಹೆಸರಿನಲ್ಲಿ ಇದೆಲ್ಲವೂ ಸಾಕಾರಗೊಂಡರಷ್ಟೇ, ನಿನ್ನ ಕನಸಿನ ರಾಮರಾಜ್ಯ ನಿರ್ಮಾಣದತ್ತ ಸಮಾಜವನ್ನು ಸಮಾಜವನ್ನು ಸಿದ್ಧಗ ಸಿದ್ಧಗೊಳಿಸಬಹುದು. ಆಶಾವಾದಿಗಳಾಗೋಣ!

Comments