ಯುವನಿಧಿ 5ನೇ ಗ್ಯಾರಂಟಿಗೆ ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಚಾಲನೆ

ಶಿವಮೊಗ್ಗ
(70 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ಯವನಿಧಿ)
ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಕೊನೆಯದಾದ 'ಯುವನಿಧಿ'ಗೆ ಶಿಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದರು. ವಿವೇಕಾನಂದರ ಜನ್ಮದಿನದಂದೇ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, ಫಲಾನುಭವಿಗಳ ಖಾತೆಗೆ ಯೋಜನೆಯ ಹಣವನ್ನು ವರ್ಗಾವಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ సిఎం ಸಿದ್ದರಾಮಯ್ಯ, "2022-23ನೇ ಶೈಕ್ಷಣಿಕ ಸಾಲಿನ ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇಷ್ಟು ದಿನ ಕಾಯ್ದು 'ಯುವನಿಧಿ' ಜಾರಿಗೆ ತರಲಾಗಿದೆ. ಸಂವಿಧಾನದ ಆಶಯಗಳನ್ನು ನೆರವೇರಿಸುವುದು ಮತ್ತು ಬಡವರ ಬದುಕು ಭದ್ರ ಪಡಿಸುವುದೇ ಸರಕಾರದ ಪಂಚ ಗ್ಯಾರಂಟಿಗಳ ಮೂಲ ಉದ್ದೇಶ,'' ಎಂದರು.
ಸಂವಿಧಾನದ ಆಶಯಗಳ ಈಡೇರಿಕೆ, ಬಡವರ ಬದುಕು ಭದ್ರ - ಪಡಿಸುವುದೇ ಸರಕಾರದ ಪಂಚ ಗ್ಯಾರಂಟಿಗಳ ಮೂಲ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ - ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 'ಯುವನಿಧಿ' ಯೋಜನೆಗೆ ಅಡಕೆ ಹಿಂಗಾರ ಬಿಡಿಸಿ ಚಾಲನೆ ನೀಡಿ, ರಾಷ್ಟ್ರೀಯ ಯುವದಿನ - ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
"ಅಸಮಾನತೆಯಿಂದ ನರಳುವ ಜನ ಪ್ರಭುತ್ವದ ವಿರುದ್ಧ ದಂಗೆ ಏಳುತ್ತಾರೆ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಎಚ ಎಚ್ಚರಿಕೆಯ ಮಾತುಗಳನ್ನು ಗಮನದಲ ಗಮನದಲ್ಲಿಟ್ಟುಕೊಂಡೇ ಸರಕಾರ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ," ಎಂದರು.

"ಯಾವ ಧರ್ಮ ಹಸಿದವರಿಗೆ ಅನ್ನ ನೀಡುವುದಿಲ್ಲವೋ ಅಂಥದರ ಮೇಲೆ ನಂಬಿಕೆ ಇಲ್ಲ' ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅವರ ಜನ್ಮದಿನವಾದ ಇಂದು ಯುವಪೀಳಿಗೆಗೆ ಮಹತ್ವಾಕಾಂಕ್ಷೆಯ ಯುವನಿಧಿ ಕಾರ್ಯಕ್ರಮ ಚಾಲನೆ ನೀಡಲಾಗಿದೆ,'' ಎಂದರು.

ಪಂಚ ಯೋಜನೆಗಳಿಂದ ಕೈಗೆ ಬಲ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, 'ಪಂಚ ಗ್ಯಾರಂಟಿಗಳಿಂದ 'ಕೈ'ಗೆ ಬಲ ಬಂದಿದೆ. ಯಾರು ಎಷ್ಟೇ ಟೀಕೆ ಮಾಡಲಿ ಕೊನೆಗೆ ಕೆಲಸಗಳೇ ಉಳಿದುಕೊಳ್ಳುತ್ತವೆ,'' ಎಂದರು.

ಸರಕಾರದ ಈ ಕಾರ್ಯಕ್ರಮಗಳ ಉದ್ದೇಶ ಜನರಿಗೆ ಕೇವಲ ಹಣ ನೀಡುವುದಲ್ಲ, ಅವರ ಬದುಕಿಗೆ ಭರವಸೆ ತುಂಬುವುದಾಗಿದೆ. ನುಡಿದಂತೆ ನಡೆದ ಈ ಸರಕಾರ ಇಡೀ ದೇಶಕ್ಕೆ ಮಾದರಿಯಾಗಿದೆ. ಯುವಜನರು ಸ್ವಾಭಿಮಾನದಿಂದ ಬದುಕಬೇಕು ಎಂಬುದು ರಾಜೀವ್ ಗಾಂಧಿ ಅವರ ಒತ್ತಾಸೆಯಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿ?: 
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ, ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ವೈದ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬೇಳೂರು ಗೋಪಾಲಕೃಷ್ಣ ಶಾರದಾಪೂರಾನಾಯ್ಕ, ಡಿ.ಎಸ್.ಅರುಣ್, ಡಿ.ಜಿ.ಶಾಂತನಗೌಡ, ಬಿ.ಕೆ.ಸಂಗಮೇಶ್ವರ, ರಾಜೇಗೌಡ, ಶ್ರೀನಿವಾಸ್, ತಮ್ಮಣ್ಣ ಭೀಮಣ್ಣನಾಯ್ಕ ಇತರರಿದ್ದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು.
#ಸಿದ್ದರಾಮಯ್ಯ ಹೇಳಿಕೆ ಮುಖ್ಯಾಂಶಗಳು

# ರಾಜ್ಯದಲ್ಲಿ ಜನರ ಕಷ್ಟ, ನಿರುದ್ಯೋಗ ಪ್ರಮಾಣ ಏರಿಕೆ, ಬೆಲೆ ಏರಿಕೆಗೆ ಪರಿಹಾರವಾಗಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಹಂತಹಂತವಾಗಿ ಗ್ಯಾರಂಟಿಗಳಿಗೆ ಚಾಲನೆ ನೀಡಲಾಗಿದೆ.

# 2022-23ನೇ ಶೈಕ್ಷಣಿಕ ಸಾಲಿನ ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗಿಸಲು ಇಷ್ಟು ದಿನ ಕಾಯ್ದು 'ಯುವನಿಧಿ' ಜಾರಿಗೆ ತರಲಾಗಿದೆ.

# ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆ ಇರಲಿ. ಉದ್ಯೋಗ ಸಿಕ್ಕ ತಕ್ಷಣ ಅವರಿಗೆ ಯುವನಿಧಿ ಸ್ಥಗಿತ ವಾಗುತ್ತದೆ.

# ಮಾರುಕಟ್ಟೆ ಆಧಾರಿತ ತರಬೇತಿ: ಯುವನಿಧಿಗೆ ನೋಂದಣಿಯಾದವರಿಗೆ ಮಾರುಕಟ್ಟೆ ಬೇಡಿಕೆಗೆ ಅನುಗುಣವಾದ ಕೌಶಲಾಭಿವೃದ್ಧಿ ತರಬೇತಿ ನೀಡಿ, ಉದ್ಯೋಗ ಮೇಳದ ಮೂಲಕ ರಾಜ್ಯ, ರಾಷ್ಟ್ರಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಕೊಡಿಸುವ ಜವಾಬ್ದಾರಿ ಸರಕಾರದ್ದು.

# ಫಲಾನುಭವಿಗಳಾದ ಪುನೀತ್, ದರ್ಶನ್, ಪ್ರಜ್ವಲ್, ಪೂಜಾ ಮತ್ತಿತರರಿಗೆ ಸಾಂಕೇತಿಕವಾಗಿ ಯುವನಿಧಿ ಚೆಕ್ ವಿತರಣೆ. ಸ್ಥಳದಲ್ಲೇ 70 ಸಾವಿರ ನೋಂದಾಯಿತರಿಗೆ ಹಣ ಜಮಾವಣೆ.

#ಗ್ಯಾರಂಟಿಗಳ ಪಂಚ್

# ಶಕ್ತಿ ಯೋಜನೆ: ಜೂನ್ 11ರಿಂದ ಇದುವರೆಗೆ 130.28 3 2. ಕೋಟಿ ವೆಚ್ಚದಲ್ಲಿ ಮಹಿಳೆಯರಿಂದ ಉಚಿತ ಬಸ್ ಪ್ರಯಾಣ.

#ಗೃಹಜ್ಯೋತಿ: ರಾಜ್ಯಾದ್ಯಂತ ಕುಟುಂಬಗಳಿಗೆ 1.65 ಕೋಟಿ ರೂ. ಮೊತ್ತದ ವಿದ್ಯುತ್ ಸೌಲಭ್ಯ.

# ಗೃಹಲಕ್ಷ್ಮಿ: : 1.17 ಕೋಟಿ ಕುಟುಂಬದ ಯಜಮಾನತಿಯರಿಗೆ ಮಾಸಿಕ 2 ಸಾವಿರ ರೂ. ಜಮಾ.

#ಅನ್ನಭಾಗ್ಯ: ಕೇಂದ್ರದಿಂದ ಅಕ್ಕಿ ಸಿಗದಿದ್ದಕ್ಕೆ ಐದು ಕೆಜಿ ಅಕ್ಕಿಯ ಜತೆಗೆ ಉಳಿದ ಐದು ಕೆಜಿ ಅಕ್ಕಿಯ ಖರೀದಿಗೆ 170 ರೂ. ಸಹಾಯಧನ.

# ಯುವನಿಧಿ:
2022-23 ನೇ ಸಾಲಿನಲ್ಲಿ ಒಟ್ಟು 3.90 ಲಕ್ಷ ಪದವೀಧರರು, 18 ಸಾವಿರ ಡಿಪ್ಲೊಮಾ ಪಡೆದವರಿಗೆ ಸೌಲಭ್ಯ.

Comments