"ಕೆಜಿಎಫ್ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪದಕ 8ನೇ ತರಗತಿ ವಿದ್ಯಾರ್ಥಿನಿ ಎಂ.ಲಿಜಿ ಶಾನನ್ ಸಾಧನೆ"

"ಕೆಜಿಎಫ್‌ನ ಸೇಂಟ್ ಜೋಸೆಫ್ ಕಾನ್ವೆಂಟ್‌ನ 8ನೇ ತರಗತಿ ವಿದ್ಯಾರ್ಥಿನಿ ಎಂ.ಲಿಜಿ ಶಾನನ್ ಸಾಧನೆ"

ಕೆಜಿಎಫ್: ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹೆಚ್ಚಿಸಲು
ರಕ್ಷಣಾ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿದ್ದ ವೀರ್ ಗಾಥಾ 3.0 ಕಾಠ್ಯಕ್ರಮದಲ್ಲಿ ನಗರದ ಚಾಂಪಿಯನ್ ರೀಫ್‌ನ ಸೇಂಟ್ ಜೋಸೆಫ್ ಕಾನ್ವೆಂಟ್‌ನ 8ನೇ ತರಗತಿ ವಿದ್ಯಾರ್ಥಿನಿ ಎಂ.ಲಿಜಿ ಶಾನನ್ ಪಾಲ್ಗೊಂಡು ರಾಷ್ಟ್ರಪತಿ ಪದಕ ಗೆದ್ದಿದ್ದಾಳೆ.

ವೀರ್‌ಗಾಥಾ 3.0 ಸ್ಪರ್ಧೆಯಲ್ಲಿ ಸೂಪರ್ 100 ವಿದ್ಯಾರ್ಥಿಗಳಲ್ಲಿ ಶಾನನ್ ಕೂಡ ಸ್ಥಾನ ಗಳಿಸಿದ್ದಳು. ಇದರಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1.36 ಕೋಟಿಗೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ವಿಜೇತರಿಗೆ ತಲಾ 10 ಸಾವಿರ ರೂ.ಗಳ ಬಹುಮಾನ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

2008ರ ನವೆಂಬರ್ 26ರಂದು ಮುಂಬಯಿ ಮೇಲೆ ಉಗ್ರರು ನಡೆಸಿದ ದಾಳಿ ವೇಳೆ ಪ್ರಾಣವನ್ನೇ ಪಣಕ್ಕಿಟ್ಟು ಉಗ್ರ ಕಸಬ್‌ನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ತುಕಾರಾಂ ಓಂಬ್ಲೆ ಅವರ ಸಾಹಸಗಾಥೆಯ ಚಿತ್ರವನ್ನು ಎಂ. ಲಿಜಿಶಾನನ್ ಬಿಡಿಸಿದ್ದರು. ಶಾನನ್ ಅಲ್ಲದೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಶಾಲೆಯ ಧೃತಿ, ಕೊಡಗಿನ ಪಾಲಿಬೆಟ್ಟದ ಲೂರ್ದಸ್ ಹಿಲ್ ಹೈ ಕಾನ್ವೆಂಟ್ ಶಾಲೆಯ ಆರ್. ರೋಶಿ ಉಳಿದ ಇಬ್ಬರು ವಿದ್ಯಾರ್ಥಿನಿಯರಾಗಿದ್ದು, ಎಲ್ಲರೂ 6ರಿಂದ 8ನೇ ತರಗತಿ ವಿಭಾಗದಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ. ಯೋಜನೆಯನ್ನು ಪ್ರಶಸ್ತಿಗಳ 202100 ಶೌರ್ಯ ಪೋರ್ಟಲ್ (ಜಿಎಪಿ) ಅಡಿಯಲ್ಲಿ ಸ್ಥಾಪಿಸಲಾಗಿದ್ದು, ಶೌರ್ಯ ಪ್ರಶಸ್ತಿ ಪುರಸ್ಕೃತರ ವಿವರಗಳನ್ನು ಮತ್ತು ಅವರ ಧೈರ್ಯಶಾಲಿ ಜೀವನ ಕಥೆಗಳನ್ನು ಸಶಸ್ತ್ರ ಪಡೆ ಅಧಿಕಾರಿಗಳು, ಸಿಬ್ಬಂದಿ ಶೌರ್ಯ ಹಾಗೂ ತ್ಯಾಗವನ್ನು ವಿದ್ಯಾರ್ಥಿಗಳ ಮೂಲಕ ಕವಿತೆ, ವರ್ಣಚಿತ್ರ, ಪ್ರಬಂಧ ಮತ್ತು ವಿಡಿಯೊಗಳ ಮುಖಾಂತರ ಪ್ರಚುರಪಡಿಸುವುದು ಯೋಜನೆಯ ಉದ್ದೇಶವಾಗಿದೆ.

Comments