ಹೊಸ ವರ್ಷ ನಿಮ್ಮ ಬಾಳಲ್ಲಿ. ಸುಖ ಸಂತೋಷ ನೆಮ್ಮದಿ ತರಲಿ

2023ಕ್ಕೆ ವಿದಾಯ... 2024ಕ್ಕೆ ಸ್ವಾಗತ... ಹೊಸ ವರ್ಷ ಎಂದರೆ ಖಂಡಿತಾ ಮನಸ್ಸಿನಲ್ಲೊಂದು ಆನಂದ ಮೂಡುತ್ತದೆ. ಇದು ಬರೀ ಕ್ಯಾಲೆಂಡರ್ ಬದಲಾಯಿಸುವ ದಿನ, ಕ್ಷಣ ಅಲ್ಲ. ಹೊಸ ಶಕ್ತಿ, ಹುರುಪು, ಹೊಸ ದೃಷ್ಟಿಕೋನದೊಂದಿಗೆ ಮತ್ತೊಂದು ವರ್ಷವನ್ನು ಆಚರಿಸುವ ಸಡಗರವೂ ಹೌದು. ಇದೇ ಕಾರಣಕ್ಕೆ ಹೊಸ ವರ್ಷ ಎಂದರೆ ವಿಶ್ವದೆಲ್ಲದೆಡೆ ಸಂತಸ ಮನೆ ಮಾಡಿರುತ್ತದೆ.

ಡಿಸೆಂಬರ್ 31ರ ಮಧ್ಯರಾತ್ರಿ ಗಡಿಯಾರದ ಮುಳ್ಳುಗಳು 12 ಅನ್ನು ಮುಟ್ಟುತ್ತಿದ್ದಂತೆಯೇ ವಿಶ್ವದೆಲ್ಲೆಡೆ ಹರ್ಷೋದ್ಗಾರ ಮುಗಿಲುಮುಟ್ಟಿರುತ್ತದೆ. ಹೊಸ ವರ್ಷದ ಹೊಸ ಹುರುಪು ಆ ಕ್ಷಣದಿಂದಲೇ ಶುರುವಾಗುತ್ತದೆ. ಅಲ್ಲಿಂದ ನಮ್ಮ ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಹಾಳೆ ತೆರೆಯುತ್ತದೆ. ಹೀಗೆ ನಮ್ಮಲ್ಲೊಂದು ಚೈತನ್ಯ, ಆನಂದ ಮೂಡಿಸುವ ಈ ಸುಂದರ ಕ್ಷಣದಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವಂತಹ ಕೆಲ ಶುಭಾಶಯದ ಸಂದೇಶಗಳು ಇಲ್ಲಿವೆ.


2024 ಸ್ವಾಗತಿಸಲು ನಾವೆಲ್ಲಾ ಸಿದ್ದರಾಗಿದ್ದೇವೆ ಅಲ್ವಾ? ಹೊಸ ವರ್ಷ ಎಂದರೆ ಏನೋ ಹೊಸ ನಿರೀಕ್ಷೆ ಮತ್ತು ಭರವಸೆ. ನಮ್ಮ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿ ಎಂದು ಮನಸ್ಸು ಬಯಸುವುದು, ಅದರಂತೆ ಹೊಸ ವರ್ಷದಂದು ನಮ್ಮ ಸ್ನೇಹಿತರು, ಬಂಧು ಬಳಗಕ್ಕೆ ಈ ವರ್ಷ ನಿಮಗೆ ಒಳಿತನ್ನೇ ಮಾಡಲಿ ಎಂದು ತುಂಬ ಮನಸ್ಸಿನಿಂದ ಹಾರೈಸುತ್ತೇವೆ.
#ಈ ಹೊಸ ವರ್ಷದಲ್ಲಿ.. ನಿಮಗೆ ಏನು ಬೇಕೋ ಅದು ನಿಮ್ಮದಾಗಲಿ
@ಪ್ರತಿದಿನ ಸುಂದರವಾಗಿರಲಿ, ರಾತ್ರಿಗಳು ಪ್ರಕಾಶಮಾನವಾಗಿರಲಿ
@ನಿಮ್ಮ ಪಾದಗಳು ಯಾವಾಗಲೂ ಯಶಸ್ಸಿನಿಂದ ಚುಂಬಿಸಲ್ಪಡಲಿ
@ನನ್ನ ಗೆಳೆಯ ನಿನಗೆ ಹೊಸ ವರ್ಷದ ಶುಭಾಶಯಗಳು.
@ಹೊಸ ವರ್ಷದ ಶುಭಾಶಯಗಳು 2024

ಹೊಸ ವರ್ಷ ಖಾಲಿ ಇರುವ ಒಂದು ಪುಸ್ತಕದಂತೆ, ಅದರಲ್ಲಿ ಸುಂದರ ಕತೆಗಳನ್ನು ಬರೆಯುತ್ತಾ ಹೋದರೆ ಆ ಪುಸ್ತಕದಲ್ಲಿರುವ ಕತೆಗಳೂ ಎಂದೆಂದಿಗೂ ಮನಸ್ಸಿನಿಂದ ಮಾಸಲ್ಲ. ಮೊದಲೆಲ್ಲಾ ಹೊಸ ವರ್ಷ ಎಂದರೆ ಗ್ರೀಟಿಂಗ್ಸ್ ಕಾರ್ಡ್‌ಗಳದ್ದೇ ಸದ್ದು, ಆದರೆ ಈಗ ಎಲ್ಲವೂ ಡಿಜಿಟಲ್ ಆಗಿರುವುದರಿಂದ ಶುಭಾಶಯಗಳು ಕೂಡ ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಕೋರುತ್ತಾರೆ. ನೀವು ಈ ವರ್ಷ ನಿಮ್ಮ ಆಪ್ತರಿಗೆ, ಸ್ನೇಹಿತರಿಗೆ, ಪ್ರೇಮಿಗೆ ಕಳುಹಿಸಲು ಸುಂದರವಾದ ಗ್ರೀಟಿಂಗ್ ಬಯಸುತ್ತಿದ್ದರೆ ಇಲ್ಲಿದೆ ನೋಡಿ:

ನಿಮಗೆ 12 ತಿಂಗಳು ಯಶಸ್ಸು, 52 ವಾರ ನಗು, 365 ದಿನಗಳು ಸಂತೋಷ, 8760 ಗಂಟೆ ಆನಂದ, 525600 ನಿಮಿಷ ಅದೃಷ್ಟ, 31536000 ಸೆಕೆಂಡ್‌ ನೆಮ್ಮದಿ ತುಂಬಿರಲಿ.
 ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

Comments