"ಗಣಿ ಪುನರ್ವಸತಿಗೆ ಅಣಿ": ಸದಾನಂದ ಹೆಗಡೆ

* ಸದಾನಂದ ಹೆಗಡೆ

#ಯೋಜನಾ ವೆಚ್ಚ: 24996 ಕೋಟಿ ರೂ.
#ಸುಪ್ರೀಂ ಕೋರ್ಟ್ ನಿರ್ದೇಶನ ದಂತೆ ಸಿಇಎಂಐಝಡ್ ನೀಲನಕ್ಷೆ
#ಸಿಇಎಂಐಝಡ್: ಗಣಿ ಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಯೋಜನೆ
# ಯೋಜನೆ ಜಾರಿಗೆ ಪ್ರತ್ಯೇಕ ಸಂಸ್ಥೆ ಕೆಎಂಇಆರ್‌ಸಿ ಸ್ಥಾಪನೆ
#ಕೆಎಂಇಆರ್‌ಸಿ : ಕರ್ನಾಟಕ ಗಣಿಬಾಧಿತ ಪ್ರದೇಶಗಳ ಮರು ನಿರ್ಮಾಣ ಸಂಸ್ಥೆ

*ಗಣಿ ಬಾಧಿತ ಗ್ರಾಮಗಳು*
ಬಳ್ಳಾರಿ:105
ವಿಜಯನಗರ :34
ಚಿತ್ರದುರ್ಗ:60 
ತುಮಕೂರು:81

₹ಜಿಲ್ಲಾವಾರು ಹಂಚಿಕೆಯಾಗಿರುವ ಅನುದಾನ ಮೊತ್ತ 
(ರೂ. ಕೋಟಿಗಳಲ್ಲಿ)
#ಬಳ್ಳಾರಿ-ವಿಜಯನಗರ
13378.41
#ಚಿತ್ರದುರ್ಗ
3792.30
#ತುಮಕೂರು
2554.05
#ರೈಲು ಸಂಪರ್ಕ
5271

ಅದು 2010ನೇ ಇಸವಿ. ಬಳ್ಳಾರಿಯಿಂದ ಮಂಗಳೂರಿಗೆ ಪ್ರತಿದಿನವೂ |ಪ್ರವಾಹೋಪಾದಿಯಲ್ಲಿ ಯುದ್ಧಕ್ಕೆ ಹೊರಟಂತೆ ಗಣಿ ಲಾರಿಗಳು ಪ್ರಯಾಣಿಸುತ್ತಿದ್ದವು. ಪ್ರಯಾಣಿಕ ಸಂಚಾರಕ್ಕೆಂದು ರೂಪಿಸಲಾದ ರಸ್ತೆಗಳಲ್ಲಿ ಲಾರಿಗಳ ಆಟಾಟೋಪದಿಂದ ರಸ್ತೆಗಳೆಲ್ಲಾ ಗುಂಡಿಗಳಾದುವು. ಇನ್ನು ಪರಿಸರದ ಮೇಲಾದ ದುಷ್ಪರಿಣಾಮಗಳನ್ನು ಲೆಕ್ಕವಿಟ್ಟವರಿಲ್ಲ. ಬಳ್ಳಾರಿ ಗಣಿ ಹಗರಣ ಕುರಿತು ದೇಶವೇ ಬೆಚ್ಚಿ ಬಿದ್ದಿದ್ದ ಸಂದರ್ಭ ಅದು. ಮಾಧ್ಯಮಗಳಲ್ಲಿ ಹಗರಣ ಕುರಿತು ದಿನವೂ ಹೊಸ ಹೊಸ ರೋಚಕ ಮಾಹಿತಿಗಳೇ ತುಂಬಿರುತ್ತಿದ್ದವು. 15 ವರ್ಷಗಳ ಬಳ್ಳಾರಿ ಗಣಿಗಾರಿಕೆಗೆ ಸುಪ್ರೀಂ ಕೋರ್ಟ್ ಅಂಕುಶ ಹಾಕಿದ್ದು ಈ ಸಂದರ್ಭದಲ್ಲಿಯೇ. ದಶಕದ ಹಿಂದೆಯೇ ಬಳ್ಳಾರಿ ಗಣಿಗಾರಿಕೆಗೆ ತಡೆಯೊಡ್ಡಿದ ಸರ್ವೋಚ್ಚನ್ಯಾಯಾಲಯ ಸಂತ್ರಸ್ತರ ಪರಿಹಾರಕ್ಕೆ ಆದೇಶ ನೀಡಿತು.

ಕಳೆದ ಎಂಟು ತಿಂಗಳಿನಿಂದ ರಾಜ್ಯದ ಗಣಿಬಾಧಿತ ಜಿಲ್ಲೆಗಳ ಪುನರ್ವಸತಿ ಯೋಜನೆ ಅನುಷ್ಠಾನ ಆಗುತ್ತಿದೆ. 24996 ಕೋಟಿ ರೂ. ಮೊತ್ತದ ಈ ಬೃಹತ್ ಯೋಜನೆಯ ಅನುಷ್ಠಾನಕ್ಕೆ ಹತ್ತು ವರ್ಷಗಳ ಗಡುವು ನಿಗದಿಪಡಿಸಲಾಗಿದೆ. 2023ರಲ್ಲಿ ಕಮಲಾಪುರದ ಪ್ರಾಣಿ ಸಂಗ್ರಹಾಲಯ, ಜಿಟಿಟಿಸಿಗಳಿಗೆ ಮೂಲಸೌಕರ್ಯ ಹಾಗೂ ಅರಣ್ಯ ಇಲಾಖೆಯ ಚಿಕ್ಕ ಯೋಜನೆಯೊಂದನ್ನು ಒಳಗೊಂಡಂತೆ ಇದುವರೆಗೂ 20 ಕೋಟಿ ರೂ. ವೆಚ್ಚಮಾಡಲಾಗಿದೆ. ಈ ಬೃಹತ್ ಯೋಜನೆಗೆ 2011ರಲ್ಲಿ ರೂಪುರೇಷೆ ಸಿದ್ಧತೆ ಕಾರ್ಯ ಆರಂಭವಾಗಿತ್ತು. ಇದರನ್ವಯ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಾಮಗಾರಿ ನಡೆಯಲಿದೆ.
ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದರೂ ಸಂತ್ರಸ್ತರ ಪಾಡು ಹಾಗೆಯೇ ಇತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ಗಣಿ ಬಾಧಿತರ ಪುನರ್ವಸತಿ ಯೋಜನೆ ರೂಪಿಸಲು 2011ರಿಂದ ನೂರಾರು ಬಾರಿ ಸಭೆ ನಡೆಸಲಾಯಿತು. 'ಒಡಿಶಾ ಮಾದರಿ'ಯಲ್ಲಿ ಪರಿಹಾರ ಯೋಜನೆಯ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಯಿತು. ಇದರ ಶ್ರೇಯ ಸಲ್ಲುವುದು ಸಮಾಜ ಪರಿವರ್ತನ ಸಮುದಾಯ (ರಿ) ಸಂಸ್ಥೆಗೆ. ಈ ಸಂಸ್ಥೆ ಕಾಲಕಾಲಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಪೆಟಿಶನ್ ಹಾಕುವುದರಿಂದ ಮೊದಲಾಗಿ ಕಾನೂನು ಹೋರಾಟಗಳ ಮುಖಾಂತರ ಇಂಥದ್ದೊಂದು ಯೋಜನೆಯ ಜಾರಿಗೆ ದಶಕದಿಂದ ಶ್ರಮಿಸಿ ಕೈಪಿಡಿ ಸಿದ್ಧಪಡಿಸಿತ್ತು.

ಕೈಪಿಡಿಯ ಮಾರ್ಗದರ್ಶನ: ಕೆಎಂಇಆರ್‌ಸಿಗಿಂತ ಮೇಲೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರ ಮೇಲುಸ್ತುವಾರಿ ಸಮಿತಿ ಇದ್ದು, ಅವರ ಒಪ್ಪಿಗೆ ಬಳಿಕವೇ ಯೋಜನೆ ಜಾರಿ ಸಂಬಂಧ ಕೆಲಸ ಕೈಗೆತ್ತಿಕೊಳ್ಳಬಹುದಾಗಿದೆ. ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಗಣಿಬಾಧಿತ ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದೂ ಕೈಪಿಡಿಯಲ್ಲಿ ಹೇಳಲಾಗಿದೆ. ಸರಕಾರದ ಇನ್ನಿತರ ಕಾರ್ಯಕ್ರಮದ ಅಡಿಯಲ್ಲಿ ಯೋಜನೆಗೆ ಈಗಾಗಲೇ ಡಿಪಿಆರ್ ಇರುವಂತಿಲ್ಲ. ಪುನರ್ವಸತಿ ಯೋಜನೆಗೆ ಸ್ಥಳ ನಿಗದಿಪಡಿಸುವುದು, ಅಗತ್ಯ ಬಿದ್ದಲ್ಲಿ ಭೂಮಿಯ ವಿಚಾರದಲ್ಲಿ ಸ್ಪಷ್ಟತೆಯನ್ನು ಅನುಮತಿಯನ್ನು ಜಿಲ್ಲಾಡಳಿತ ಪಡೆದುಕೊಳ್ಳಬೇಕು. ಅಲ್ಲದೆ ಸ್ಥಳೀಯವಾಗಿ ಹೊಂದುವ ತಂತ್ರಜ್ಞಾನ, ಸ್ಥಳೀಯರ ಸಹಭಾಗಿತ್ವ ಪಡೆದುಕೊಳ್ಳುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಕೈಪಿಡಿ ಬೆಳಕು ಚೆಲ್ಲುತ್ತದೆ. ಪ್ರತಿಯೊಂದು ಕಾಮಗಾರಿಯನ್ನೂ ಕೆಎಂಇಆರ್‌ಸಿ ಆಡಳಿತ ನಿರ್ದೇಶಕರ ನೇತೃತ್ವದ ಏಳು ಜನರ ಸಮಿತಿ ಸಾಣೆ ಹಿಡಿಯುತ್ತದೆ.
2012: ಗಣಿಬಾಧಿತ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸುಪ್ರೀಂ ಕೋರ್ಟ್‌ಗೆ (ಸಿಇಸಿ) ವರದಿ ನೀಡಿತು.

■2012: 60% ಕೆಎಂಇಆರಸಿ ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ವರದಿಯಲ್ಲಿ ನಿರ್ದೇಶನ.

#2014: ಕೆಎಂಇಆರ್‌ಸಿಯನ್ನು ಲಾಭ ರಹಿತ ಸಂಸ್ಥೆಯಾಗಿ ಕಂಪನಿ ಕಾಯ್ದೆಗಳ ಪ್ರಕಾರ ನೋಂದಣಿ

# 2017: ಸಿಇಸಿ ವರದಿ ಆಧಾರದಲ್ಲಿ ಕೆಎಂಇಆರ್‌ಸಿಗೆ ಬೇಕಿದ್ದ ಅಭಿವೃದ್ಧಿ ಅನುದಾನದ ಡಿಪಿಆ‌ರ್ ಸಲ್ಲಿಸಲು ನಿರ್ದೇಶನ.

#2018: ಗಣಿಗಾರಿಕೆಗೆ ಪ್ರತ್ಯೇಕ ರೈಲ್ವೆ ಹಾಗೂ ರಸ್ತೆಗಳ ಅಗತ್ಯತೆಗಳ ಕುರಿತು ವಿವರ ನೀಡುವಂತೆ ಕೆಎಂಇಆರ್‌ಸಿಗೆ ಸುಪ್ರೀಂ ನಿರ್ದೇಶನ.

#2018: ಗಣಿಬಾಧಿತ ಪ್ರದೇಶ ಗಳಲ್ಲಿ ತುರ್ತು ಕೆಲಸಗಳ ಪಟ್ಟಿ ನೀಡಲು ನಾಲ್ಕು ಜಿಲ್ಲೆಗಳ ಡಿಸಿ, ಜಿಪಂ ಸಿಇಒಗಳಿಗೆ ಸಿಇಸಿ ಆಹ್ವಾನ.

# 2020: ಯೋಜನೆಯ ಮೌಲ್ಯಮಾಪನ/ ಮೇಲುಸ್ತುವಾರಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಸಮಿತಿ ನೇಮಕ.

#2022: ಸಿಇಎಂಐಝಡ್ ಗೆ ಸುಪ್ರೀಂ ಕೋರ್ಟ್ ಅಂತಿಮ ಒಪ್ಪಿಗೆ

#2023: ಯೋಜನೆ ಡಿಪಿಆರ್ (ಡೀಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಸಿದ್ಧ

Comments