ಯುವಕರಿಗೆ ಮೋದಿ ಕರೆ ಡ್ರಗ್ಸ್‌ನಿಂದ ದೂರವಿರಲು ಸಲಹೆ ಯುವದಿನ ಕಾರ್ಯಕ್ರಮದಲ್ಲಿ 'ವಂಶಾಡಳಿತ ಕೊನೆಗಾಣಿಸಿ'
ನಾಸಿಕ್: “ದೇಶದ ಯುವಕರು 21ನೇ ಶತಮಾನದ ಅದೃಷ್ಟಶಾಲಿಗಳು. ಅಮೃತಕಾಲ ಘಟ್ಟದಲ್ಲಿ ಭಾರತವನ್ನು ಅಭಿವೃದ್ಧಿ ಹಾದಿಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಯುವ ಪೀಳಿಗೆ ಸಜ್ಜಾಗಿದೆ. ವಂಶಪಾರಂಪರ್ಯ, ಕುಟುಂಬ ಆಡಳಿತ ಕೊನೆಗಾಣಿಸಲು ಯುವ ಜನತೆ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸ್ವಯಂ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು,'' ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದರು.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೃಹತ್ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಬಳಿಕ, ಇತಿಹಾಸ ಪ್ರಸಿದ್ಧ ಕಾಲಾರಾಮ್ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ನಂತರ, ತಪೋವನ ಮೈದಾನದಲ್ಲಿ 27ನೇ ರಾಷ್ಟ್ರೀಯ ಯುವ ಜನೋತ್ಸವ ಉದ್ದೇಶಿಸಿ ಮಾತನಾಡಿದರು.
"ಯುವ ಜನತೆ ಪ್ರಸ್ತುತ ದೇಶದ ಬ್ರಾಂಡ್ ರಾಯಭಾರಿಗಳು. ಇಂಥ ಯುವಕರು ಜೀವನಕ್ಕೆ ಮಾರಕವಾಗಿರುವ, ದೇಶದ ಭದ್ರತೆಗೆ ಸವಾಲು ಸೃಷ್ಟಿಸಿರುವ ಮಾದಕ ದ್ರವ್ಯ ಸೇವನೆ ಹಾಗೂ ಡ್ರಗ್ ಮಾಫಿಯಾದಿಂದ ದೂರ ಉಳಿಯಬೇಕು,'' ಎಂದು ಸಲಹೆ ನೀಡಿದರು.
"ಭಾರತ ಪ್ರಜಾಪ್ರಭುತ್ವದ ತಾಯಿ. - ಮತದಾನದ ಮೂಲಕ ಜನತೆ ತಮ್ಮ : ರಾಜಕೀಯ ನಿಲುವು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ. ಭವ್ಯ ಭಾರತ ನಿರ್ಮಾಣ ಮಾಡಲು ಯುವ ಜನತೆ ಚುನಾವಣೆ ఎంబ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳ ಬೇಕು,'' ಎಂದು ಮೋದಿ ಹೇಳಿದರು. "ಮುಂದಿನ 25 ವರ್ಷಗಳ 'ಅಮೃತಕಾಲ' ಘಟ್ಟದಲ್ಲಿ ದೇಶವನ್ನು ಸದೃಢವಾಗಿ ಕಟ್ಟಬೇಕಿದೆ. ಸ್ವಾತಂತ್ರೋತ್ಸವದ ಶತಮಾನ ಕಾಲದ 'ಕರ್ತವ್ಯಕಾಲ' ಘಟ್ಟಕ್ಕೆ ಮುನ್ನೆಡೆಯಲು ಯುವ ಜನತೆ ತಮ್ಮ ಜವಾಬ್ದಾರಿ, ಹೊಣೆಗಾರಿಕೆ ಆದ್ಯತೆ ಅರಿತು ಸಮಾಜ, ದೇಶದ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಬೇಕು,'' ಎಂದರು.
#ವೋಕಲ್ ಫಾರ್ ಲೋಕಲ್:
"ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ 'ವೋಕಲ್ ಫಾರ್ ಲೋಕಲ್'ಗೆ ಆದ್ಯತೆ ನೀಡಬೇಕು,'' ಎಂದ ಮೋದಿ ಅವರು, "ತಾಯಿ, ಸೋದರಿ ಹೆಸರನ್ನು ಬಳಸಿಕೊಂಡು ನಿಂದಿಸುವುದನ್ನು ಬಿಡಬೇಕು,'' ಎಂದು ಮನವಿ ಮಾಡಿದರು.
'ದೇಶದಲ್ಲಿಂದು ಯುವ ಜನತೆಗೆ ಹೊಸ ಹೊಸ ಅವಕಾಶಗಳು ತೆರೆದುಕೊಂಡಿವೆ. ಸ್ಟಾರ್ಟ್ ಅಪ್, ಕೌಶಲ್ಯ ಅಭಿವೃದ್ಧಿ, ಐಐಟಿ, ಎನ್‌ಐಟಿಗಳು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಿವೆ. ಡೋನ್ ವಲಯ, ಅನಿಮೇಷನ್, ಗೇಮಿಂಗ್, ಹೆದ್ದಾರಿಗಳು, ಏರ್‌ಪೋರ್ಟ್‌ಗಳು, ವಂದೇ ಭಾರತ್ ರೈಲುಗಳು ಜನರಿಗಾಗಿ ರೂಪಿಸಲಾದ ಯೋಜನೆಗಳು,'' ಎಂದು ಮೋದಿ ಹೇಳಿದರು.
Comments
Post a Comment