"ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಬೇಡಿಕೆ"

•|ಬಯಸಿದ ಉದ್ಯೋಗ ಪಡೆಯಲು ಅಗತ್ಯ ಕೌಶಲ ಬೇಕು. ಇದಕ್ಕೆ ಮ್ಯಾನೇಜ್ ಮೆಂಟ್ ಕೋರ್ಸ್‌ಗಳನ್ನು ಮಾಡಿಕೊಳ್ಳಿ.|•

ಇತ್ತೀಚಿನ ದಿನಗಳಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಣಕಾಸು, ವಿನ್ಯಾಸ, ಹೋಟೆಲ್, ರಿಸ್ಕ್ ಮ್ಯಾನೇಜ್‌ಮೆಂಟ್ ಸೇರಿ ನಾನಾ ವಿಭಾಗಗಳಲ್ಲಿ ಮ್ಯಾನೇಜ್‌ಮೆಂಟ್ ಕೋಸ್ ೯ಗಳನ್ನು ಮಾಡಬಹುದು. ಆಫ್‌ಲೈನ್ ಮಾತ್ರವಲ್ಲ, ಆನ್‌ಲೈನ್‌ನಲ್ಲಿಯೂ ಈ ಕೋರ್ಸ್‌ಗಳು ಲಭ್ಯ. ಪದವಿ ಮುಗಿದ ಬಳಿಕ ಈ ರೀತಿಯ ಕೋರ್ಸ್‌ಗಳನ್ನು * ಮಾಡಿಕೊಂಡರೆ ಹೆಚ್ಚಿನ ವೇತನದ ಉದ್ಯೋಗ ಪಡೆಯಬಹುದು. ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಬಯಸಿದ ಉದ್ಯೋಗ ಪಡೆಯಲು, ಆ ಕ್ಷೇತ್ರದಲ್ಲಿ ಪರಿಣತಿ ಹೊಂದಲು, ಕೌಶಲಗಳನ್ನು ವೃದ್ಧಿಸಿಕೊಳ್ಳಲು ನೆರವಾಗುತ್ತವೆ. ಉದ್ಯೋಗ ಭದ್ರತೆಯ ಜತೆಗೆ ಆರ್ಥಿಕ ಭದ್ರತೆಯನ್ನೂ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಬೇಡಿಕೆಯಲ್ಲಿರುವ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

•ಮಾಸ್ಟರ್ ಆಫ್ ರಿಟೇಲ್ ಮ್ಯಾನೇಜ್‌ಮೆಂಟ್: ಭಾರತದಲ್ಲಿ ಬೇಡಿಕೆಯಿರುವ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಲ್ಲಿ ಇದೂ ಒಂದು. ಎರಡು ವರ್ಷಗಳ ಅವಧಿಯ ಕೋರ್ಸ್ ಇದು. ರೀಟೇಲ್ ಮ್ಯಾನೇಜ್ ಮೆಂಟ್‌ನ ಇತ್ತೀಚಿನ ಬೆಳವಣಿಗೆ ಸೇರಿದಂತೆ ಆ ಸಂಬಂಧಿ ತ ಎಲ್ಲವನ್ನೂ ಇಲ್ಲಿ ಅಭ್ಯಸಿಸಲಾಗುತ್ತದೆ. ಈ ಕೋರ್ಸ್‌ಗೆ ಸೇರುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.45ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಈ ಕೋರ್ಸ್‌ಗೆ ಸೇರಲು ಸಿಎಟಿ, ಎಕ್ಸ್‌ಎಟಿ ಅಥವಾ ಎಂಎಟಿಯಂತಹ ಪ್ರವೇಶ ಪರೀಕ್ಷೆಯನ್ನು ಬರೆಯಬೇಕು.
•ಮಾಸ್ಟರ್ಸ್ ಇನ್ ಮ್ಯಾನೇಜ್‌ಮೆಂಟ್ ಸ್ಟಡೀಸ್:
 ಇದು ಎರಡು ವರ್ಷಗಳ ಅವಧಿಯ ಕೋರ್ಸ್ ಆಗಿದ್ದು, ನಾಲ್ಕು ಸೆಮಿಸ್ಟರ್‌ಗಳಾಗಿ ವಿಂಗಡಿಸಲಾಗಿದೆ. ಪಠ್ಯ, ಪ್ರಾಯೋಗಿಕ ಉಪನ್ಯಾಸದ ಜತೆಗೆ ಇಂಟರ್ನ್‌ಷಿಪ್ ಕೂಡ ಇರಲಿದೆ. ಉದ್ಯಮದಲ್ಲಿ ಕೆಲಸ ಮಾಡಲು ಬಯಸುವವರಿಗೆ ವ್ಯಾಪಾರ ನಿರ್ವಹಣಾ ಸಾಮರ್ಥ್ಯಗಳ ಬಗ್ಗೆ ಕಲಿಸಿಕೊಡಲಾಗುತ್ತದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅಖಿಲ ಭಾರತ ತಾಂತ್ರಿಕ ಮಂಡಳಿ(ಎಐಸಿಟಿಇ) ದಿಲ್ಲಿಯಲ್ಲಿ ಈ ಕೋರ್ಸ್ ಮಾಡಬಹುದು.

•ಮಾಸ್ಟರ್ಸ್ ಇನ್ ಫೈನಾನ್ಶಿಯಲ್: 
ಅಭ್ಯರ್ಥಿಗಳು ಪದವಿ ಮುಗಿದ ಕೂಡಲೇ ಈ ಕೋರ್ಸ್ ತೆಗೆದುಕೊಳ್ಳಬಹುದು. ಇದರಲ್ಲಿ ಲೆಕ್ಕಪತ್ರ ನಿರ್ವಹಣೆ, ಹಣಕಾಸು ನಿರ್ವಹಣೆ, ಲೆಕ್ಕ ಪರಿಶೋಧಕದ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಬಹುದು. ಎರಡು ವರ್ಷದ ಕೋರ್ಸ್ ಇದಾಗಿದೆ. ಈ ಕೋರ್ಸ್ ಮಾಡಿದವರು ಸ್ಟಾಕ್ ಟ್ರೋಕರ್, ಹೂಡಿಕೆ ವ್ಯವಸ್ಥಾಪಕ ಹಾಗೂ ಹಣಕಾಸು ವಿಶ್ಲೇಷಕ ಸೇರಿದಂತೆ ಹೆಚ್ಚಿನ ವೇತನ ಪಡೆಯುವ ಕೆಲಸ ಗಿಟ್ಟಿಸಿಕೊಳ್ಳಬಹುದು.
ಮಾಸ್ಟರ್ ಇನ್ ಮಾರ್ಕೆಟಿಂಗ್: ಜಾಗತಿಕವಾಗಿ ತೀವ್ರ ಸ್ಪರ್ಧೆಯಲ್ಲಿರುವ ಮಾರ್ಕೆಟಿಂಗ್ ವಿಭಾಗದಲ್ಲಿ ಯಶಸ್ವಿ ಅಭ್ಯರ್ಥಿಗಳನ್ನು ರೂಪಿಸುವಲ್ಲಿ ಭಾರತ ಮುಂದಿದೆ. ಮಾರುಕಟ್ಟೆ ವಿಶ್ಲೇಷಣೆ, ಪ್ರಚಾರ ಸೇರಿದಂತೆ ವಿದ್ಯಾರ್ಥಿಗಳು ಮಾರ್ಕೆಟಿಂಗ್ ಪ್ರಕ್ರಿಯೆಯ ಅಂಶಗಳನ್ನು ಅರ್ಥೈಸಿಕೊಳ್ಳಬಹುದು. ಈ ಮೂಲಕ ಅಭ್ಯರ್ಥಿಗಳು ಅತ್ಯಾಧುನಿಕ ಮಾರ್ಕೆಟಿಂಗ್ ತಂತ್ರಗಳನ್ನು ಇಲ್ಲಿ ಕಲಿಯುತ್ತಾರೆ.

•ಮಾಸ್ಟರ್ ಇನ್ ರಿಸ್ಕ್ ಮ್ಯಾನೇಜ್‌ಮೆಂಟ್‌:
 ಅತ್ಯುತ್ತಮ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳಲ್ಲಿ ಇದು ಅಗ್ರಗಣ್ಯ. ಈ ಕಲಿತವರಿಗೆ ಭರಪೂರ ಉದ್ಯೋಗಾವಕಾಶಗಳಿವೆ. ರಿಸ್ಕ್ ಮ್ಯಾನೇಜ್‌ಮೆಂಟ್ ಕುರಿತ ಸಮಗ್ರ ವಿಚಾರಗಳನ್ನು ಇಲ್ಲಿ ಕಲಿಯಬಹುದು. ಚಾರ್ಟಡ್್ರ ಇನ್ಸುರೆನ್ಸ್ ಇನ್‌ಸ್ಟಿಟ್ಯೂಟ್ ಈ ಮ್ಯಾನೇಜ್‌ಮೆಂಟ್ ಕೋಸ್೯ಗಳನ್ನು ನೀಡುತ್ತದೆ. 

•ಪಿಜಿ ಡಿಪ್ಲೊಮಾ ಇನ್ ಮ್ಯಾನೇಜ್ ಮೆಂಟ್:
 ಇದು ಎರಡು ವರ್ಷಗಳ ಕೋರ್ಸ್. ಈ ಕೋರ್ಸ್ ಪೂರೈಸುವುದರಿಂದ ಹಣಕಾಸು, ಜಾಗತಿಕ ವ್ಯಾಪಾರ, ಮಾನವ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ವೃತ್ತಿಜೀವನದಲ್ಲಿ ಹೊಸ ಕಲಿಕೆ, ಎದುರಾಗುವ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ.

•ಡಿಪ್ಲೊಮಾ ಇನ್ ಹೋಟೆಲ್‌ ಮ್ಯಾನೇಜ್‌ಮೆಂಟ್:
ಪ್ರೌಢಶಾಲೆಯನ್ನು ಪೂರ್ಣಗೊಳಿಸಿದ ಬಳಿಕ ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಹೋಟೆಲ್ ಆಡಳಿತ, ಹಣಕಾಸು, ಜಾಹೀರಾತು, ಆಹಾರ ಮತ್ತು ಪಾನೀಯ ನಿರ್ವಹಣೆ, ಅಡುಗೆ ಸೇರಿದಂತೆ ಹೋಟೆಲ್‌ನ ಇನ್ನಿತರ ವಿಭಾಗಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಬೇಕಾದ ಪರಿಣತಿಯನ್ನು ಇಲ್ಲಿ ಗಳಿಸಿಕೊಳ್ಳಬಹುದು.

Comments