ಬರೆದು ಬದುಕು ಬದಲಿಸಿ : ವಿಕ-ಸ್ನೇಹ ಬುಕ್ ಹೌಸ್ ಸ್ಫೂರ್ತಿದಾಯಕ ಲೇಖನ ಸ್ಪರ್ಧೆ

ಇದು ಗೆಲುವಿನತ್ತ ಓಡುವವರ ಜಗತ್ತು. ಇವರ ಮಧ್ಯೆಯೂ ಸೋತು ನಿಂತವರು ಹಲವರಿರಬಹುದು. ಮುಂದಿನ ನಡೆಗೆ ಹುಮ್ಮಸ್ಸಿನ ಮಾತಿನ ನಿರೀಕ್ಷೆಯಲ್ಲಿ ಇರು ವವರೂ ಇರಬಹುದು. ಇಂಥವರಿಗೆ ನೀವು ಸ್ಫೂರ್ತಿಯ ಮದ್ದು ನೀಡಬಲ್ಲ ವೈದ್ಯರಾಗಬಲ್ಲಿರಾ? ಸಕಾರಾತ್ಮಕತೆಯ ದೀಪವಾಗಬಲ್ಲಿರಾ? ನೀವು ಬರಹದ ಮೂಲಕ ಇತರರಲ್ಲಿ ಸ್ಫೂರ್ತಿ ತುಂಬಬಲ್ಲಿರಾದರೆ, ಸೋತ ಮನವೊಂದನ್ನು ಬರವಣಿಗೆಯ ಮೂಲಕ ಹುಮ್ಮಸ್ಸಿನಿಂದ ನಳನಳಿಸುವಂತೆ ಮಾಡಬಲ್ಲಿರಾದರೆ ಇಲ್ಲಿದೆ ವೇದಿಕೆ. ವಿಕ - ಸ್ನೇಹ ಬುಕ್ ಹೌಸ್ ಯುಗಾದಿ ಲೇಖನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ, ಬಹುಮಾನ ಪಡೆಯಿರಿ.

("ಯುಗಾದಿ ಲೇಖನ ಸ್ಪರ್ಧೆ-2024")

ಹೌದು, ವಿಜಯ ಕರ್ನಾಟಕದ ಯುಗಾದಿ ಲೇಖನ ಸ್ಪರ್ಧೆ ಮರಳಿ ಬಂದಿದೆ. ಇದಕ್ಕಾಗಿ ನೀವು ಓದುಗರಲ್ಲಿ ಹೊಸ ತ ಹುಮ್ಮಸ್ಸು ತುಂಬುವ 1000 ಶಬ್ದಗಳ ಒಳಗಣ ಬರಹವನ್ನು ಹೆಸರು, ವಿಳಾಸ ಸಹಿತವಾಗಿ ಫೆ.14ರ ಒಳಗೆ ಕಳುಹಿಸಬೇಕು ಮೊದಲ ಮೂರು ಲೇಖನಗಳು ಯುಗಾದಿ ಸಂಚಿಕೆಯಲ್ಲಿ ಪ್ರಕಟವಾಗಲಿವೆ. ಉತ್ತಮ ಐದು ಲೇಖನಗಳಿಗೆ ಬಹುಮಾನವಿದೆ. ಆಯ್ದ ಲೇಖನಗಳ ಸಂಗ್ರಹವನ್ನೂ ಪ್ರಕಟಿಸಲಾಗುವುದು.

ಇದನ್ನು ಸಿಕ್ಕಿರುವ ಸುವರ್ಣ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳ ಬೇಡಿ ದೇವರು ನಿಮಗೆ ಇದರಲ್ಲಿ ಬಾಗವಹಿಸಿ ಬಹುಮಾನ ಗೆಲ್ಲುವಂತ ಶಕ್ತಿ ಕೊಡಲಿ ಅಂತ ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. 

ಬರೆದು ಮೋಟಿವೇಟ್ ಮಾಡಿ, ಬಹುಮಾನ ಪಡೆಯಿರಿ
#ಪ್ರಥಮ ಬಹುಮಾನ: ರೂ.10,000/-
#ದ್ವಿತೀಯ ಬಹುಮಾನ: ರೂ.8,000/-
#ತೃತೀಯ ಬಹುಮಾನ: ರೂ.5,000/-
#ಎರಡು ಮೆಚ್ಚುಗೆಯ ಬಹುಮಾನ: ತಲಾ ರೂ.2000/-

(ಲೇಖನಗಳನ್ನು ಇಮೇಲ್ ಮಾಡಿ: vkyugadi@vijaykarnataka.com
ಕೊನೆಯ ದಿನಾಂಕ: ಫೆಬ್ರವರಿ 14, 2024)

Comments