ಕೇಂದ್ರ ಸಂಪುಟಕ್ಕೆ ಎಚ್ಡಿಕೆ ನಿಗೂಢ :-ಮೋದಿ ಮನಸ್ಸಿನಲ್ಲೇನಿದೆ ಗೊತ್ತಿಲ್ಲ ಎಂದ ದೇವೇಗೌಡ ನಾನು ಸ್ಪರ್ಧೆ ಮಾಡಲ್ಲ, ರಾಜ್ಯಸಭೆಯೇ ಸಾಕು

#ಬೆಂಗಳೂರು:-
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಂಪುಟದಲ್ಲಿ ಸಚಿವರಾಗುತ್ತಾರೆ ಪ್ರತಿಕ್ರಿಯಿಸಿರುವ ಎಂಬ ವರದಿಗಳ ಜೆಡಿಎಸ್ ಬಗ್ಗೆ ವರಿಷ್ಠ ಎಚ್.ಡಿ.ದೇವೇಗೌಡರು, 'ನರೇಂದ್ರ ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ'' ಎಂದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮುಂದೆ ಆ ಬಗ್ಗೆ ಚರ್ಚೆಯಾಗಿಲ್ಲ. ಆದರೆ, ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಮೋದಿ ಅವರ ಆಕ್ಷನ್ ಪ್ಲಾನ್ ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ,'' ಎಂದರು.

#ಮೋದಿ ಸೂಚನೆಯಂತೆ ತೀರ್ಮಾನ: ಕುಮಾರ ಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ನರೇಂದ್ರ ಮೋದಿ ಅವರು ಏನು ಹೇಳುತ್ತಾರೋ ನೋಡೋಣ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಆದರೆ, ಮೋದಿ ಅವರು ಹೇಳಿದಂತೆ ಕುಮಾರಸ್ವಾಮಿ ಕೇಳುತ್ತಾರೆ. ಅಂತಹ ಪರಿಸ್ಥಿತಿ ಬಂದರೆ ನಾವೆಲ್ಲ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ,'' ಎಂದು ಹೇಳಿದರು.

#ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆಯನ್ನು ದೇವೇಗೌಡರು ಸ್ಪಷ್ಟವಾಗಿ ತಳ್ಳಿ ಹಾಕಿದರು. "ವಯಸ್ಸು 92 ಆಗಿದೆ. ರಾಜ್ಯಸಭೆ ಸದಸ್ಯತ್ವ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
"ಮಾತನಾಡುವ ಶಕ್ತಿ ಇದೆ, ನೆನಪಿನ ಶಕ್ತಿಯೂ ಗ ಇದೆ. ನಡೆದಾಡಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಚುನಾವಣೆ ವೇಳೆ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ. ಪಕ್ಷದ ಕೆಲಸಗಳಿಗಾಗಿ ಪ್ರವಾಸ ಮಾಡುತ್ತೇನೆ. ಬಿಜೆಪಿಯವರು ಎಲ್ಲಿಗೆ ಕರೆದರೂ ಹೋಗಿ ಪ್ರಚಾರ ಮಾಡುತ್ತೇನೆ,'' ಎಂದು ತಿಳಿಸಿದರು.

# ಪ್ರಜ್ವಲ್ ಸ್ಪರ್ಧೆ ಖಚಿತ: 'ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಮತ್ತೆ ಸ್ಪರ್ಧೆ ಮಾಡುತ್ತಾರೆ. ಈ ಬಗ್ಗೆ ನಿಮಗೆ ಅನುಮಾನ ಬೇಡ. ಮೋದಿ ಅವರು ಪ್ರಜ್ವಲ್ ಗೆ ಆಶೀರ್ವಾದ ಮಾಡುತ್ತಾರೆ. ಕುಮಾರಸ್ವಾಮಿ ಕೂಡಾ ಆಶೀರ್ವಾದ ಮಾಡುತ್ತಾರೆ" ಎಂದು ಪ್ರಶ್ನೆಯೊಂದಕ್ಕೆ ದೇವೇಗೌಡರು ಸ್ಪಷ್ಟಪಡಿಸಿದರು.

#ಯುವನಿಧಿಗೆ ಪ್ರಶಂಸೆ: “ಜ. 22ರ ಕಾರ್ಯಕ್ರಮದ ಬಳಿಕ ರಾಮಮಂದಿರಕ್ಕೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜತೆಗೆ, ರಾಜ್ಯಾದ್ಯಂತ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಮಾಡಲು ಸೂಚಿಸಿರುವುದು ಒಳ್ಳೆಯ ವಿಚಾರ. ಇದು ಸಾಫ್ಟ್ ಹಿಂದುತ್ವವೋ, ಮತ್ತೊಂದೋ ಗೊತ್ತಿಲ್ಲ. ಆದರೆ, ಈ ವಿಚಾರ ಸ್ವಾಗತಾರ್ಹ,'' ಎಂದರು. "ಸರಕಾರದ 5ನೇ ಗ್ಯಾರಂಟಿ 'ಯುವನಿಧಿ' ಯೋಜನೆ ಒಳ್ಳೆಯದು, ಯುವ ಜನರಿಗೆ ಹಣ ಕೊಡಲಿ. ಅದರಲ್ಲಿ ತಪ್ಪೇನೂ ಇಲ್ಲ. ಫಲಾನುಭವಿ ಯುವಜನರು ಕೂಡ ರಾಮಮಂದಿರಕ್ಕೆ ಹೋಗಿ ಬರಲಿ. ಯುವನಿಧಿಯ ಮೊದಲ ಕಂತಿನ ಹಣವನ್ನು ಬೇಗ ಬಿಡುಗಡೆ ಮಾಡಲಿ'" ಎಂದು ಸಲಹೆ ಮಾಡಿದರು.
#ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯ'#
ಕಾವೇರಿ ನದಿ ನೀರಿನ ವಿಚಾರದಲ್ಲಿ ಕನ್ನಡಿಗರಿಗೆ ನಿರಂತರ ಅನ್ಯಾಯವಾಗುತ್ತಿದ್ದು, ತಮಿಳುನಾಡು ರಾಜ್ಯದವರು ನೀರು ಬಿಡಿಸಿ ಎಂದ ತಕ್ಷಣ ಪ್ರಾಧಿ ಕಾರದವರು ನೀರು ಹರಿಸಿ ಎಂದು ಆದೇಶ ಕೊಡುತ್ತಿದ್ದಾರೆ. ಯಾರೊಬ್ಬರೂ ವಸ್ತುಸ್ಥಿತಿಯನ್ನು ಬಂದು ನೋಡುವ ಗೋಜಿಗೆ ಹೋಗುತ್ತಿಲ್ಲ ಎಂದು ಎಚ್.ಡಿ.ದೇವೇಗೌಡರು ವ್ಯಕ್ತಪಡಿಸಿದರು. ತೀವ್ರ ಬೇಸರ

"ಕರ್ನಾಟಕ ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟವನ್ನು ಪರಿಹಾರ ಮಾಡುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ. ಈ ಚುನಾವಣೆ ಮುಗಿದ ನಂತರ ಮತ್ತೆ ದೇಶದ ಪ್ರಧಾನಿ ಆಗಲಿರುವ ಮೋದಿ ಅವರು, ಈ ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ,'' ಎಂದು ಹೇಳಿದರು.

'ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ದೇಶದ ಎಲ್ಲ ಜನರಿಗೆ ಉದ್ಯೋಗ, ಜೀವನೋಪಾಯ నిea ಸಲಹುತ್ತಿದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನವಾದರೆ ಮಾತ್ರ ನಗರದ ನೀರಿನ ಬವಣೆ ತಪ್ಪಿಸಬಹುದು. ಬೆಂಗಳೂರಿನ ಜನಸಂಖ್ಯೆ 1.35 ಕೋಟಿ ಇದ್ದು, 2044ರ ವೇಳೆಗೆ 3 ಕೋಟಿ ಮೀರಲಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ 64 ಟಿಎಂಸಿ ನೀರಿನ ಅಗತ್ಯ ಇದೆ,'' ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದರು.

Comments