•ಪಿಸಿಒಡಿಗೆ ಇದೆ ಸೂಕ್ತ ಪರಿಹಾರ:ಡಾ|| ಶ್ರೀಕಾಂತ್ ಮೋರ್ಲಾವರ್•
ಡಾ|| ಶ್ರೀಕಾಂತ್ ಮೋರ್ಲಾವರ್
(ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಸಂಸ್ಥೆಯ ಅಧ್ಯಕ್ಷ)
ಇತ್ತೀಚೆಗೆ ಮಹಿಳೆಯರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆ ಅಂದರೆ ಅದು ಪಿಸಿಒಡಿ. ಈ ಸಮಸ್ಯೆ ಸಾಮಾನ್ಯವಾಗಿ 25ರಿಂದ 30 ವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಬಹುತೇಕ ಮಹಿಳೆಯರಲ್ಲಿ ಆಹಾರ ಪದ್ಧತಿಯಲ್ಲಿ * ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಅಧಿಕ ತೂಕ, ಕೂದಲು ಉದುರುವಿಕೆ, ಮೊಡವೆ, ಅನಗತ್ಯ ಕೂದಲ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ಇದರಲ್ಲಿ ಕಾಣಬಹುದು.
ಅಪರಿಪಕ್ವ ಅಂಡಾಣು: ಅಪರಿಪಕ್ವ ಅಂಡಾಣು ಗರ್ಭಾಶಯದ ಎರಡು ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಒಡಿ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 28-30 ದಿನಗಳ ಅವಧಿಗೊಮ್ಮೆ ಋತುಸ್ರಾವವಾಗುತ್ತದೆ. ಋತುಸ್ರಾವವಾದ 11-14ನೇ ದಿನಗಳ ಮಧ್ಯೆ ಯಾವುದಾದರೂ ಅಂಡಕೋಶದಿಂದ ಅಂಡ ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತಿರುತ್ತದೆ ಹಾಗೂ ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಆದರೆ ಯಾರಲ್ಲಿ ಪಿಸಿಒಡಿ ಸಮಸ್ಯೆ ಇರುತ್ತದೆಯೋ ಅವರಲ್ಲಿ ಅಂಡಕೋಶದಿಂದ ಬಿಡುಗಡೆಯಾಗದೆ, ಅಲ್ಲಿಯೇ ಅಪರಿಪಕ್ವವಾದ ಅಂಡಾಣುಗಳು ನೀರಿನ ಗುಳ್ಳೆಯಂತೆ ಅಂಡಕೋಶದ ಒಳಪದರದ ಮೇಲೆ ಉಳಿದು ಹೋಗುತ್ತವೆ.
•ಕಾರಣ: ಹಾರ್ಮೋನ್‌ಗಳ ಅಸಮತೋಲನ, ಅಸಮರ್ಪಕ ಜೀವನಶೈಲಿ, ಅಧಿಕ ಮಾನಸಿಕ ಒತ್ತಡ, ದೈಹಿಕ ವ್ಯಾಯಾಮದ ಕೊರತೆ, ಆಧುನಿಕ ಆಹಾರ ಪದ್ಧತಿ, ಅನುವಂಶಿಕ ಇತ್ಯಾದಿ ಪಿಸಿಒಡಿ ಸಮಸ್ಯೆಗೆ ಕಾರಣಗಳಾಗಿವೆ.
•ಲಕ್ಷಣ: ಹೆಚ್ಚಿದ ಆ್ಯಂಡೋಜನ್ ಹಾರ್ಮೋನ್‌ಗಳ ಕಾರಣದಿಂದ ದೇಹ ತೂಕದಲ್ಲಿ ಹೆಚ್ಚಳ, ಅನಿಯಮಿತ ಋತುಸ್ರಾವ, ಬಂಜೆತನ, ಅಂಡಾಣು ಬಿಡುಗಡೆಗೆ ಅಡ್ಡಿಯಾಗುವುದು, ಋತುಚಕ್ರ ವಿಳಂಬ, ಋತುಸ್ರಾವ ಆಗದಿರುವುದು, ಅತಿ ಕಡಿಮೆ ಅಥವಾ ಯಾವಾಗಲಾದರೊಮ್ಮೆ ಅತಿ ಋತುಸ್ರಾವ ಉಂಟಾಗುವುದು.
•ಪರಿಣಾಮ: ಗರ್ಭ ಧರಿಸಲು ಸಾಧ್ಯವಾಗದಿರುವುದು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್ ಸಮಸ್ಯೆ, ಅಧಿಕ ರಕ್ತಸ್ರಾವ, ಗರ್ಭಕೋಶದ ಕ್ಯಾನ್ಸರ್, ಎಂಡೋಮೆಟ್ರಿಯಂ, ಕ್ಯಾನ್ಸರ್, ಖಿನ್ನತೆ, ಹಗಲು ನಿದ್ರೆ, ಗೊರಕೆ ಇತ್ಯಾದಿ ಪಿಸಿಒಡಿಯ ಪರಿಣಾಮಗಳಾಗಿವೆ.
•ಹೋಮಿಯೋಕೇರ್ ಚಿಕಿತ್ಸೆ:
ಹೋಮಿಯೋಕೇರ್‌ನಲ್ಲಿ ವ್ಯಕ್ತಿಯ ಮಾನಸಿಕ, ಶಾರೀರಿಕ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಪರೀಕ್ಷಿಸಿ ಚಿಕಿತ್ಸೆ ನೀಡಲಾಗುವುದು. ಇಲ್ಲಿನ ಕಾನ್ಸಿಟ್ಯೂಷನಲ್ ಚಿಕಿತ್ಸೆಯು ವ್ಯಕ್ತಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಇಲ್ಲಿ ರೋಗಿಯ ಹಿಂದಿನ ಚಿಕಿತ್ಸೆಯ ಬಗ್ಗೆ ವಿವರ, ಕುಟುಂಬದ ಹಿನ್ನೆಲೆ ಮತ್ತು ಇನ್ನಿತರ ಮಾಹಿತಿಯ ಜೊತೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ಬಗ್ಗೆ ಮಾಹಿತಿಯನ್ನು ನಮ್ಮ ಕ್ಲಿನಿಕ್‌ಗಳಲ್ಲಿ ನೀಡಲಾಗುತ್ತದೆ ಹಾಗೂ ಚಿಕಿತ್ಸೆಯ ವಿವರ ತಿಳಿಸಲಾಗುತ್ತದೆ ಎಂದು ಈ ಸಂಸ್ಥೆಯ ತಜ್ಞರು ಹೇಳಿದ್ದಾರೆ.
•ಹೋಮಿಯೋಕೇರ್ ಇಂಟರ್ನ್ಯಾಷನಲ್: ಕರ್ನಾಟಕದಲ್ಲಿನ ಶಾಖೆಗಳು ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್‌ಎಸ್‌ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಬಿಜಾಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮ ಕೂರು, ಹಾಸನ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ.
=:ಆರೋಗ್ಯಕರ ಜೀವನಶೈಲಿ:=
>ಪೌಷ್ಟಿಕ ಆಹಾರ ಸೇವಿಸಿ. ಹೆಚ್ಚು ಸಕ್ಕರೆ, ಉಪ್ಪು, ಕೆಫೀನ್, ಆಲ್ನೋಹಾಲ್ ಸೇವಿಸಬೇಡಿ.
> ಧೂಮಪಾನ ಮಾಡಬೇಡಿ. ನಿಯಮಿತ ಆಹಾರ ಸೇವಿಸಿ.
>ಅಧಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿ.
>ತೂಕ ಕಡಿಮೆ ಮಾಡಿ ಅಥವಾ ನಿಯಂತ್ರಣದಲ್ಲಿಡಿ. ಕೊಬ್ಬಿನ ಆಹಾರ ಸೇವಿಸಬೇಡಿ.
Comments
Post a Comment