ಅಯೋಧ್ಯೆಯಲ್ಲಿ ವಿಶ್ವದ ಅತಿದೊಡ್ಡ 'ಸೌರಶಕ್ತಿ ಚಾಲಿತ ಬೀದಿದೀಪಗಳ ಮಾರ್ಗ'

ಅಯೋಧ್ಯೆಯನ್ನು ಸೌರ ನಗರವನ್ನಾಗಿಸುವ ಪ್ರದೇಶ ಯೋಗಿ ಆದಿತ್ಯನಾಥ ರವರು ವಿಶ್ವದ ಅತಿದೊಡ್ಡ 'ಸೌರಶಕ್ತಿ ಚಾಲಿತ ಬೀದಿದೀಪಗಳ ಮಾರ್ಗ'ವನ್ನು ಅಭಿವೃದ್ಧಿಪಡಿಸಿದ್ದು ನಗರದ ಗುಪ್ತರ್ ಘಾಟ್ ಮತ್ತು ನಿರ್ಮಲಿ ಕುಂಡ್ ನಡುವೆ 10.2 ಕಿ.ಮೀ ಪ್ರದೇಶದಲ್ಲಿ 470 ಸೌರಶಕ್ತಿ ಚಾಲಿತ ಬೀದಿದೀಪಗಳನ್ನು ಸ್ಥಾಪಿಸಲಾಗಿದೆ.

ಈ ವಿಶಿಷ್ಟವಾದ ಸಾಧನೆ ಮೂಲಕ ಅಯೋಧ್ಯೆಯು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್. ರೆಕಾರ್ಡ್ಸ್ಗೆ ಪ್ರವೇಶಿಸಿದೆ. ದೀಪೋತ್ಸವದ ವೇಳೆ ಅತಿ ಹೆಚ್ಚು ಮಣ್ಣಿನ ದೀಪಗಳ ಬೆಳಗುವಿಕೆಯು ಮೊದಲ ಗಿನ್ನೆಸ್ ದಾಖಲೆಯಾಗಿದೆ. ಸಿಎಂ ಯೋಗಿ ರವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯು (ಯುಪಿಎನ್‌ಇಡಿಇ) ಸುಮಾರು 70% ಅನುಷ್ಠಾನ ಕಾರ್ಯವನ್ನು ಪೂರ್ಣಗೊಳಿಸಿದ್ದು, ಉಳಿದ 160 ಸೋಲಾರ್ ಬೀದಿದೀಪಗಳನ್ನು ಜನವರಿ 22ಕ್ಕೂ ಮುನ್ನ ಅಳವಡಿಸಲಿದೆ.
ಯುಪಿಎನ್‌ಇಡಿಇನ ಯೋಜನಾ ಅಧಿಕಾರಿಯ ಪ್ರಕಾರ, 'ಜನವರಿ 22ರ ವೇಳೆಗೆ ಅಯೋಧ್ಯೆಯ ಲಕ್ಷ್ಮಣ ಘಾಟ್‌ನಿಂದ ಗುಪ್ತರ್ ಘಾಟ್‌ವರೆಗಿನ 10.2 ಕಿ.ಮೀ ವ್ಯಾಪ್ತಿಯಲ್ಲಿ 470 ಸೌರ ಬೀದಿದೀಪಗಳನ್ನು ಸ್ಥಾಪಿಸುವ ಮೂಲಕ ವಿಶ್ವದಾಖಲೆಯಾಗಲಿದೆ. ನಿರ್ಮಲಿ ಕುಂಡ್‌ವರೆಗೆ 70% ಪೂರ್ಣಗೊಂಡಿದ್ದು, ಉಳಿದ 30% ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಲಕ್ಷ್ಮಣ ಘಾಟ್‌ನಿಂದ ಗುಪ್ತರ್ ಘಾಟ್‌ವರೆಗೆ 310

ಸೌರಶಕ್ತಿ ಚಾಲಿತ ಬೀದಿದೀಪ ಅಳವಡಿಸಿದ್ದು, ಗುಪ್ತರ್‌ ಘಾಟ್ ಮತ್ತು ನಿರ್ಮಲಿ ಕುಂಡ್ ನಡುವೆ 1.85 ಕಿ.ಮೀ ವ್ಯಾಪ್ತಿಯಲ್ಲಿ 160 ದೀಪಗಳನ್ನು ಅಳವಡಿಸಲಾಗುತ್ತಿದೆ. ಈ ಎಲ್ಲವೂ ಎಲ್‌ಇಡಿ ದೀಪಗಳಾಗಿದ್ದು 4.4 ವ್ಯಾಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿವೆ.

ಈ ಮೂಲಕ ಲಕ್ಷ್ಮಣ ಘಾಟ್‌ನಿಂದ ನಿರ್ಮಲಿ ಕುಂಡ್‌ವರೆಗೆ 10.2 ಕಿ.ಮೀ ವ್ಯಾಪ್ತಿಯು 'ವಿಕಿರಣ'ಗಳಿಂದ ಪ್ರಕಾಶಿಸಲಿದೆ.
#ರಾಮ ಪಥ ಮತ್ತು ಧರ್ಮ ಪಥದಲ್ಲಿ
 ವಿದ್ಯುತ್ ಚಾಲಿತ ಬಸ್ಸುಗಳು#

ರಾಮ ಜನ್ಮಭೂಮಿ ಮತ್ತು ಅಯೋಧ್ಯೆಯ ದೇವಸ್ಥಾನಗಳ ಭೇಟಿಗಾಗಿ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿರುವ ಯೋಗಿ ಸರ್ಕಾರವು ಧರ್ಮ ಪಥ ಮತ್ತು ರಾಮ ಪಥದಲ್ಲಿ ವಿದ್ಯುತ್ ಚಾಲಿತ ಬಸ್ಸುಗಳನ್ನು ಪರಿಚಯಿಸುತ್ತಿದೆ.

ಅಲ್ಲದೆ ಜನವರಿ 22ರ ಬಳಿಕ ದರ್ಶನ, ಪೂಜೆ ಹಿನ್ನೆಲೆಯಲ್ಲಿ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸುವುದು ಮತ್ತು ತಾತ್ಕಾಲಿಕ ಪಾರ್ಕಿಂಗ್‌ನ ತ್ವರಿತ ಅಭಿವೃದ್ಧಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಸಹ ಕೈಗೊಳ್ಳಲಾಗುವುದು.

ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಧರ್ಮ ಪಥ ಮತ್ತು ರಾಮ ಪಥದಲ್ಲಿ ವಿದ್ಯುತ್ ಚಾಲಿತ ಬಸ್ಸುಗಳನ್ನು ಆರಂಭಿಸಲಾಗುವುದು. ಜನವರಿ 15ರಿಂದ 100 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾರಂಭಿಸಿವೆ.

ಎಲೆಕ್ಟ್ರಿಕ್ ಬಸ್ ಸೇರಿದಂತೆ ವಿವಿಧ ಸಾರಿಗೆ ಸೌಲಭ್ಯಗಳ ಮೂಲಕ ಅಯೋಧ್ಯೆಯನ್ನು ಸಂಪರ್ಕಿಸಬಹುದು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕಾರಿಡಾರ್‌ಗಳನ್ನು ನಿರ್ಮಿಸಿದ್ದು, ಕೆಲ ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಗೊತ್ತುಪಡಿಸಲಾಗಿದೆ. ಸಾಕೇತ್ ಪೆಟ್ರೋಲ್‌ ಪಂಪ್‌ನಿಂದ ಲತಾ ಮಂಗೇಶ್ವ‌ರ್ ಚೌಕ್‌ವರೆಗೆ ತಾತ್ಕಾಲಿಕ & ಶಾಶ್ವತ ಸೇರಿದಂತೆ ವಿವಿಧ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಚೌದಾ ಕೋಸಿ ಮತ್ತು ಪಂಚಕೋಶಿ ಪರಿಕ್ರಮ ಮಾರ್ಗ ಹಾಗೂ ಉದಯ ಚೌಕ್‌ನಲ್ಲಿ ಹೊಸ ಪ್ರದೇಶಗಳನ್ನು ಗುರುತಿಸಿದ್ದು, 70 ಎಕರೆಯಲ್ಲಿ (10ಎಕರೆ, 35 ಎಕರೆ ಮತ್ತು 25 ಎಕರೆ) ಪಾರ್ಕಿಂಗ್ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು

Comments