UPSC ವ್ಯಕ್ತಿತ್ವ ಪರೀಕ್ಷೆ ಎದುರಿಸುವುದು ಹೇಗೆ?

ಸಾರ್ವಜನಿಕ ಸೇವೆಗಳ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಸಾಮರ್ಥ್ಯ ಮತ್ತು ಅರ್ಹತೆಯನ್ನು ನಿರ್ಣಯಿಸಲು ನಡೆಯುವ ವ್ಯಕ್ತಿತ್ವ ಪರೀಕ್ಷೆಗಳು ಹಲವು ಸವಾಲುಗಳನ್ನು ಎಸೆಯುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಅಭ್ಯರ್ಥಿಗಳು ಸೂಕ್ತ ತಯಾರಿ ನಡೆಸಬೇಕು.

•ಸಂದರ್ಶನಕ್ಕೆ ತಯಾರಿ: 
ಈ ಸಂದರ್ಶನಕ್ಕೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಕೆಲ ಕೋಚಿಂಗ್ ಸಂಸ್ಥೆಗಳು ನೀಡುವ ಉಚಿತ ಅಣಕು ಸೆಷನ್‌ಗಳನ್ನು ಎದುರಿಸಬಹುದು. ಅಲ್ಲದೆ, ಹಲವು ಸಂಸ್ಥೆಗಳ 15ಕ್ಕೂ ಹೆಚ್ಚು ಅಣಕು ಸಂದರ್ಶನಗಳಿಗೆ ಹಾಜರಾಗಬಹುದು. ಇಲ್ಲಿ ನಾಗರಿಕ ಸೇವೆ ಸಲ್ಲಿಸಿದ ಮಾಜಿ ಅಧಿಕಾರಿಗಳು, ಈ ಕ್ಷೇತ್ರದ ಪರಿಣತರು ಸಂದರ್ಶಕರಾಗಿರುತ್ತಾರೆ. ಇವರು ಅಭ್ಯರ್ಥಿಗಳ ಡಿಎಎಫ್, ಐಚ್ಚಿಕ ವಿಷಯ ಮತ್ತು ಸಾಮಾನ್ಯಜ್ಞಾನ ಆಧಾರದ ಮೇಲೆ ಅಭ್ಯರ್ಥಿಗಳ ಶೈಕ್ಷಣಿಕ ಮತ್ತು ಕುಟುಂಬದ ಹಿನ್ನೆಲೆ ಈ ಮೂರು ಹಂತಗಳಲ್ಲಿ ಸಾಮರ್ಥ್ಯ ಪರೀಕ್ಷಿಸುತ್ತಾರೆ. ಸಂದರ್ಶನವು ಆತ್ಮವಿಶ್ವಾಸ ಮತ್ತು ಜ್ಞಾನದ ನಡುವಿನ ಸ್ಪಷ್ಟತೆಯ ಸಮೀಕರಣವಾಗಿರುವುದರಿಂದ ಅಭ್ಯರ್ಥಿಗಳು ಪ್ರಜ್ಞಾಪೂರ್ವಕವಾಗಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ. 
•ಸೂಕ್ಷ್ಮ ಒಳನೋಟ:
 ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿಯ ಸಾಮಾನ್ಯ ಜ್ಞಾನದ ಒಳನೋಟ, ಸೂಕ್ಷ್ಮತೆಯನ್ನು ಪರೀಕ್ಷಿಸಲಾಗುತ್ತದೆ. ಉನ್ನತ ಹುದ್ದೆಯಲ್ಲಿದ್ದುಕೊಂಡು ಕೆಲಸಕ್ಕೆ ನ್ಯಾಯ ಒದಗಿಸುವ ಬುದ್ದಿವಂತಿಕೆ ಇದೆಯೇ ಎಂದು ಪರಿಶೀಲಿಸಲಾಗುತ್ತದೆ. ಸಾಕಷ್ಟು ಜ್ಞಾನವಿದ್ದು, ಮೊದಲ ಎರಡು ಪರೀಕ್ಷೆಯಲ್ಲಿ ಅರ್ಹರಾದ 10ರಲ್ಲಿ 6 ವಿದ್ಯಾರ್ಥಿಗಳಷ್ಟೇ ವ್ಯಕ್ತಿತ್ವ ಪರೀಕ್ಷೆಯಲ್ಲಿ ಅರ್ಹತೆ ಗಳಿಸುತ್ತಾರೆ. ಹೀಗಾಗಿ, ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕು. ಸಾಮಾನ್ಯ ಜ್ಞಾನ ಕೂಡ ಹೊಂದಿರಬೇಕು. ಕಡಿಮೆ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಒತ್ತಡವಿರುತ್ತದೆ. ಹೀಗಾಗಿ, ಅಭ್ಯರ್ಥಿಗಳು ಪ್ರತಿ ವಿಷಯದ ಕುರಿತು ಸ್ಪಷ್ಟತೆ ಹೊಂದಿರಬೇಕು.

Comments