ಸಿಇಟಿ ಅರ್ಜಿ ತಿದ್ದುಪಡಿಗೆ ಅವಕಾಶ :- ಫೆ.10ರ ನಂತರ

 ಫೆ.10ರ ನಂತರ ಪ್ರಾಧಿಕಾರದ ಪೋರ್ಟಲ್‌ನಲ್ಲಿ ಸರಿಪಡಿಸಿ: ಕೆಇಎ

ಸಿಇಟಿ-24 ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗದಂತೆ ಕ್ರಮವಹಿಸಲಾಗಿದ್ದು, ಕೆಲವು ತಪ್ಪುಗಳನ್ನು ಸರಿಪಡಿಸಲು ಫೆ.10ರ ನಂತರ ಪ್ರಾಧಿಕಾರದ ಪೋರ್ಟಲ್‌ನಲ್ಲಿ ಎಡಿಟಿಂಗ್‌ಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ತಿಳಿಸಿದೆ.

'ರಾಜ್ಯ ದತ್ತಾಂಶ ಕೇಂದ್ರ'ದಲ್ಲಿ ಕೆಲವು ದಿನಗಳ ಹಿಂದೆ ಒಂದೆರಡು ದಿನ ಸರ್ವರ್ ಡೌನ್ ಸಮಸ್ಯೆಯಿತ್ತು. ಸದ್ಯ ಸರಿಪಡಿಸ ಲಾಗಿದೆ. ಈವರೆಗೆ 1.25 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 98,000 ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ. ಶುಲ್ಕ ಪಾವತಿಯಾದರೆ ಅರ್ಜಿ ಪರಿಶೀಲನೆ ಯಶಸ್ವಿ ಯಾಗಿ ಮುಗಿದಿದೆ ಎಂದೇ ಅರ್ಥ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಸಿಇಟಿ ಅರ್ಜಿಯು 'ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡೆಲ್' (ಪರಿಶೀಲನೆ ನಮೂನೆಯೊಂದಿಗೆ) ಹೊಂದಿರುವಂತೆ ಮಾಡಲಾಗಿದೆ. ಈ ತಂತ್ರಾಂಶವು ಅರ್ಜಿ ಹಾಕುವ ವೇಳೆ ಅಭ್ಯರ್ಥಿಗಳಿಗೆ ಸ್ಯಾಟ್ಸ್ ನಂಬರ್ ಆಧರಿಸಿ ಸಂಬಂಧಿಸಿದ ಮಾಹಿತಿಯನ್ನು ತುಂಬುವ ಮತ್ತು ಪರಿಶೀಲಿಸುವ ಅವಕಾಶ ಒದಗಿಸುತ್ತದೆ. ಒಂದೇ ಬಾರಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಯಾಟ್ಸ್ ದತ್ತಾಂಶ ಕೋರಿದಾಗ
ತಂತ್ರಾಂಶದಲ್ಲಿ ತೊಂದರೆ ಉಂಟಾಗಿತ್ತು. ಈಗ ಅದನ್ನೂ ಸರಿಪಡಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಭರ್ತಿ ಮಾಡುವಾಗ ಒಟ್ಟಿಗೆ ನಾಲೈದು ಸೆಷನ್ ತೆರೆದಿಟ್ಟುಕೊಂಡಾಗ ಅರ್ಜಿಗಳು ತಪ್ಪಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಈಗ ಇದನ್ನು ಪರಿಹರಿಸಲಾಗಿದ್ದರೂ, ಒಂದೇ ಸಮಯದಲ್ಲಿ ಒಂದು ಸೆಷನ್ ಮಾತ್ರ ತೆರೆದು ಅರ್ಜಿ ಭರ್ತಿ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಇನ್ನು ಅಭ್ಯರ್ಥಿಗಳ ಸ್ಯಾಟ್ಸ್ ಮಾಹಿತಿಗೆ ಸಂಬಂಧಿಸಿದಂತೆ ಕೆಲವು ದೋಷಗಳಿದ್ದರೆ, ಅಂದರೆ ವಿದ್ಯಾರ್ಥಿಗಳ ಓದಿರುವ ಶಾಲಾ . ಮಂಡಳಿ ಕುರಿತಂತೆ ವ್ಯತ್ಯಾಸ, ತಪ್ಪುಗಳ ಆಗಿದ್ದರೆ ಅಭ್ಯರ್ಥಿಗಳು ಆತಂಕಗೊಳ್ಳುವ ಅಗತ್ಯವಿಲ್ಲ. ವಿದ್ಯಾರ್ಥಿ ಓದಿದ ಶಾಲೆಯ ಹೆಸರು ಹಾಗೂ ಓದಿದ ವರ್ಷ ಸರಿಯಾಗಿದ್ದರೆ ಸ್ಯಾಟ್ಸ್ ಮೂಲಕ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ, ಕೆಲವು ತಪ್ಪುಗಳನ್ನು ಸರಿಪಡಿಸಲು ಫೆ.10ರ ನಂತರ ಪ್ರಾಧಿಕಾರದ - ಪೋರ್ಟಲ್ ನಲ್ಲಿ ಎಡಿಟಿಂಗ್ (ತಿದ್ದುಪಡಿ) ಆಯ್ಕೆಯನ್ನು ಸಕ್ರಿಯಗೊಳಿಸಿ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ವಿವರಿಸಿದ್ದಾರೆ.

Comments