31 ಜಿಲ್ಲೆಗೆ ಸಿಗಲಿವೆ ನಾನಾತರಹದ ಅಭಿವೃದ್ಧಿಗಳು :- ಕರ್ನಾಟಕ ಡಿಮ್ಯಾಂಡ್

ಎರಡನೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಜ್ಜಾಗುತ್ತಿರುವ ರಾಜ್ಯ ಸರಕಾರದ ಮುಂದೆ ಸಾಕಷ್ಟು ನಿರೀಕ್ಷೆಗಳು ಸಾಲುಗಟ್ಟಿವೆ. ಹಣಕಾಸು ಸ್ಥಿತಿಯ ಹತ್ತಾರು ಸವಾಲುಗಳ ನಡುವೆಯೂ 2023-24ರ ಬಜೆಟ್‌ನಲ್ಲಿ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಜಾಣತನದ ಪ್ರಯತ್ನಗಳನ್ನು ನಡೆಸಿದೆ. ಆದಾಗ್ಯೂ, ಗ್ಯಾರಂಟಿ ಈಡೇರಿಕೆಯ ಭಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಲೇ ಇವೆ.
           ಈ ಎಲ್ಲ ರಾಜಕೀಯದಾಚೆಗೆ ಜನಸಾಮಾನ್ಯರ ನಡುವೆ ಅವಶ್ಯವಾಗಿ ನೂರಾರು ಸಮಸ್ಯೆಗಳು ಜೀವಂತ ಇವೆ ಎಂಬುದು ವಾಸ್ತವ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಯ ಬಗ್ಗೆ ಮಹತ್ವದ ಯೋಜನೆಗಳನ್ನು ಮುಂದಿಡಬೇಕಿದೆ. ನನೆಗುದಿಗೆ ಬಿದ್ದಿರುವ ಮೇಕೆದಾಟು, ಕಳಸಾ- ಬಂಡೂರಿ ನಾಲಾ ತಿರುವು ಯೋಜನೆ (ಮಹದಾಯಿ) ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಗಂಭೀರ ಪ್ರಯತ್ನ ನಡೆಸಬೇಕಿದೆ.ಎತ್ತಿನಹೊಳೆ ಯೋಜನೆಗೆ ನಿಗದಿತ ವೇಗ ತುಂಬಲು ಅನುದಾನದ ಅವಶ್ಯಕತೆ ಇದ್ದೇ ಇದೆ. ತುಂತುರು ನೀರಾವರಿಗೆ ಪ್ರೋತ್ಸಾಹ, ಬಿಯಾಂಡ್ ಬೆಂಗಳೂರು ಆಶಯದಂತೆ ರಾಜ್ಯದ ನಾನಾ ಭಾಗಗಳಿಗೆ ಕೈಗಾರಿಕಾ ಚಟುವಟಿಕೆ ವಿಸ್ತರಣೆ, ಜಲಜೀವನ್‌ಗೆ ವೇಗ ಸಂವರ್ಧಿಸುವುದು, ದುಡಿಯುವ ವರ್ಗದ ಕೈಹಿಡಿಯುವುದು ಸೇರಿದಂತೆ ರಾಜ್ಯದ ನಿರೀಕ್ಷೆಗಳ ಪಟ್ಟಿ ದೊಡ್ಡದು. ಪ್ರತಿ ಜಿಲ್ಲೆಗಳಿಗೆ ಗ್ಯಾರಂಟಿಗಳು ಲಭಿಸಿದಾಗ ಮಾತ್ರವೇ ಸಮಗ್ರ ಅಭಿವೃದ್ಧಿ ಸಾಧ್ಯ. ಜನರ ಆಶೋತ್ತರಗಳಿಗೆ ಸರಕಾರ ಬಜೆಟ್‌ನಲ್ಲಿ ಸ್ಪಂದಿಸಲಿ.

01 ಬೆಂಗಳೂರು
ಜೀವಾಳ: ಐಟಿ, ನಗರಾಭಿವೃದ್ಧಿ,
ನಿರೀಕ್ಷೆಗಳು: ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ

# ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ರಸ್ತೆ ನಿರ್ಮಾಣ.
# ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಹಾಗೂ ನಿರ್ವಹಣೆಗೆ 200 ಕೋಟಿ ರೂ.
# ಲಾಸ್ಟ್‌ಮೈಲ್ ಕನೆಕ್ಟಿವಿಟಿಗೆ ಲೀಡರ್ ಸರ್ವೀಸ್ ರೂಪಿಸುವ ಕೆಲಸವಾಗಲಿ
#ನಗರದಲ್ಲಿನ 75 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಅವಶ್ಯ.
# ರಸ್ತೆಗಳ ವೈಟ್‌ಟಾಪಿಂಗ್‌ಗೆ 1700 ಕೋಟಿ ರೂ. ಅನುದಾನಕ್ಕೆ ಮನವಿ
# 350 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣ


02 ಹುಬ್ಬಳ್ಳಿ- ಧಾರವಾಡ
ಜೀವಾಳ: ಉನ್ನತ ವ್ಯಾಸಂಗ, ಮಹದಾಯಿ
ನಿರೀಕ್ಷೆಗಳು: ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣಕ್ಕೆ ವಿಶೇಷ ಅನುದಾನ ಅವಶ್ಯ.

# ಹುಬ್ಬಳ್ಳಿ-ಧಾರವಾಡ ಮಧ್ಯೆ ಟ್ರಾಫಿಕ್ ದಟ್ಟಣೆ ನಿವಾರಣೆಗೆ ಕ್ರಮ.
# ಮಹದಾಯಿ ಕಾಮಗಾರಿ ಆರಂಭಿಸಲು ಹೆಚ್ಚಿನ ಅನುದಾನ ಬೇಕಿದೆ.
# ಹೊಸ ತಾಲೂಕು ಕೇಂದ್ರಗಳಲ್ಲಿ ಮೂಲ ಸೌಕರ್ಯ ತುರ್ತು.
# ಧಾರವಾಡದ ಪೂರ್ವ ಬೈಪಾಸ್ ನಿರ್ಮಾಣಕ್ಕೆ ಅನುದಾನ.

03 ಹಾವೇರಿ
ಜೀವಾಳ: ಬ್ಯಾಡಗಿ ಮೆಣಸು ಮತ್ತು ಇತರೆ ಕೃಷಿ, ಪ್ರವಾಸೋದ್ಯಮ
ನಿರೀಕ್ಷೆಗಳು: ಪ್ರತ್ಯೇಕ ಡಿಸಿಸಿ ಬ್ಯಾಂಕ್ ಅಗತ್ಯವಿದೆ.
# ಗದಗ- ಯಲವಿಗಿ ರೈಲು ಮಾರ್ಗಕ್ಕೆ ಅನುದಾನ ನಿರೀಕ್ಷೆ.
# ಪ್ರವಾಸೋದ್ಯಮ ಪ್ರಾದೇಶಿಕ ಕಚೇರಿ ತೆರೆಯಲಿ.
# ಸರ್ವಜ್ಞ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಶೇಷ ಪ್ಯಾಕೇಜ್ ಜಾರಿ ಮಾಡಿ.
# ರಾಣೇಬೆನ್ನೂರ ಬಸ್ ನಿಲ್ದಾಣಕ್ಕೆ ಕಾಯಕಲ್ಪ ಬೇಕಿದೆ.

04 ಗದಗ 
ಜೀವಾಳ: ಕೃಷಿ
ನಿರೀಕ್ಷೆಗಳು: ಗದಗ- ಯಲವಗಿ ರೈಲ್ವೆ ಭೂಸ್ವಾಧೀನಕ್ಕೆ ಅನುದಾನ ಮೀಸಲು ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ.
# ಗದಗ-ಬೆಟಗೇರಿ ಅವಳಿ ನಗರದ ರಿಂಗ್ ರೋಡ್ ನಿರ್ಮಾಣಕ್ಕೆ ಅನುದಾನ.
# ಜಿಲ್ಲೆಯ ಸಮಗ್ರ ಪ್ರವಾಸಿ ತಾಣಗಳ ಅಭಿವೃದ್ಧಿಗೆ 800 ಕೋಟಿ ರೂ. ಯೋಜನೆಗೆ ಒಪ್ಪಿಗೆ.
# ಕಪ್ಪತಗುಡ್ಡ ಔಷಧೀಯ ಸಸ್ಯಗಳ ಸಂರಕ್ಷಣೆಗಾಗಿ ಆಯುರ್ವೇದ ಮಹಾವಿದ್ಯಾಲಯ ಅಥವಾ ಸಂಶೋಧನಾ ಕೇಂದ್ರ ಘೋಷಣೆ
# ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ರಸ್ತೆಗಳ ಅಭಿವೃದ್ಧಿಗೆ ಅನುದಾನ.

05 ಉತ್ತರ ಕನ್ನಡ
ಜೀವಾಳ: ಅಡಕೆ, ಮೀನುಗಾರಿಕೆ, ಧಾರ್ಮಿಕ ಪ್ರವಾಸೋದ್ಯಮ
ನಿರೀಕ್ಷೆಗಳು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
# ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ಪ್ಯಾಕೇಜ್.
#ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲದ ಮೊತ್ತ ಹೆಚ್ಚಳ.
# ಪ್ರತ್ಯೇಕ ಹಾಲು ಒಕ್ಕೂಟದ ಸ್ಥಾಪನೆಗೆ ಪೂರಕ ಕ್ರಮಗಳ ಘೋಷಣೆ.
# ಬರ ಹಿನ್ನೆಲೆಯಲ್ಲಿ ಭತ್ತದ ಬೆಳೆ ಕೃಷಿಕರಿಗೆ ನೆರವು

06 ವಿಜಯಪುರ
ಜೀವಾಳ: ದ್ರಾಕ್ಷಿಮತ್ತು ಇತರೆ ಕೃಷಿ, ಪ್ರವಾಸೋದ್ಯಮ
ನಿರೀಕ್ಷೆಗಳು: ಯುಕೆಪಿ 3ನೇ ಹಂತಕ್ಕೆ ಬೇಕು 50 ಸಾವಿರ ಕೋಟಿ ರೂ.

# ಸರಕಾರಿ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು.
# ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ.
# ಸ್ಪರ್ಧಾತ್ಮಕ ಪರೀಕ್ಷೆಗೋಸ್ಕರ ಸರಕಾರಿ ತರಬೇತಿ ಕೇಂದ್ರ,

07 ಶಿವಮೊಗ್ಗ
ಜೀವಾಳ: ಅಡಕೆ, ಭತ್ತ ಹಾಗೂ ಇತರೆ ಕೃಷಿ, ಅರಣ್ಯ, ಪ್ರವಾಸೋದ್ಯಮ
ನಿರೀಕ್ಷೆಗಳು: ಆಯುಷ್‌ ವಿಶ್ವವಿದ್ಯಾಲಯಕ್ಕೆ ಅನುದಾನ ಬೇಕಿದೆ.
# ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿವಿ ಸ್ಥಾಪಿಸಬೇಕಿದೆ.
#ವಿಶೇಷ ಕೈಗಾರಿಕಾ ಪ್ರದೇಶ ಗುರುತಿಸಿ, ಹೊಸ ಕೈಗಾರಿಕೆಗಳಿಗೆ ಜಾಗ ಕಲ್ಪಿಸುವುದು.
# ಪ್ರಮುಖ ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಯೋಜನೆ.
# ಬಹುಬೇಡಿಕೆಯ ಟ್ರಕ್ ಟರ್ಮಿನಲ್ ತುರ್ತಾಗಿ ಸ್ಥಾಪನೆಯಾಗಲಿ.

08 ಚಿಕ್ಕಮಗಳೂರು
ಜೀವಾಳ: ಅರಣ್ಯ, ಕಾಫಿ, ಅಡಕೆ, ಪ್ರವಾಸೋದ್ಯಮ
ನಿರೀಕ್ಷೆಗಳು: ಭದ್ರಾ ಮೇಲ್ದಂಡೆ ಯೋಜನೆ ಮೂಲಕ 245 ಕೆರೆ ತುಂಬಿಸುವ ಯೋಜನೆ ಹಾಗೂ 908 ಜನವಸತಿ ಪ್ರದೇಶಗಳ ಕುಡಿಯುವ ನೀರಿನ ಯೋಜನೆ ಪೂರ್ಣಕ್ಕೆ ಹೆಚ್ಚಿನ ಅನುದಾನ.
#ಸಖರಾಯಪಟ್ಟಣ ಅಥವಾ ಲಕ್ಯಾ ಭಾಗದಲ್ಲಿ ಟೆಕ್ಸ್‌ ಟೈಲ್ಸ್ ಪಾರ್ಕ್‌ ಮಂಜೂರು ಹಾಗೂ ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಭರವಸೆ.
# ಕಡೂರಿನಲ್ಲಿ ತಾಯಿ- ಮಗು ಆಸ್ಪತ್ರೆ ಅವಶ್ಯ.
# ಶೃಂಗೇರಿಯ 100 ಬೆಡ್ ಆಸ್ಪತ್ರೆಗೆ ಹೊಸ ಕಟ್ಟಡಕ್ಕೆ ಅನುಮೋದನೆ ನಿರೀಕ್ಷೆ.
# ಅಜ್ಜಂಪುರ ಮತ್ತು ಕಳಸ ತಾಲೂಕು ಕಚೇರಿ ಕಟ್ಟಡಗಳಿಗೆ ಅನುದಾನ.
#ಕಾಡುಪ್ರಾಣಿ- ಮಾನವ ಸಂಘರ್ಷ ನಿಯಂತ್ರಣಕ್ಕೆ ವಿಶೇಷ ಅನುದಾನ

09 ಮಂಡ್ಯ
ಜೀವಾಳ: ಕಾವೇರಿ, ಕಬ್ಬು, ಭತ್ತ, ಪ್ರವಾಸೋದ್ಯಮ
ನಿರೀಕ್ಷೆಗಳು: ಮೈಶುಗರ್ ಪುನಶ್ಚತನ ಅಥವಾ ಹೊಸ ಕಾರ್ಖಾನೆ ನಿರ್ಮಾಣ.
# ಮಂಡ್ಯ ನಗರಸಭೆಯನ್ನು ನಗರಪಾಲಿಕೆ ಅಥವಾ ಬೃಹತ್ ಮಂಡ್ಯ ಆಗಿ ಮೇಲ್ದರ್ಜೆಗೇರಿಸುವುದು.
# ಟ್ರಾಮಾಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತುರ್ತು.
# ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ಗಗನಚುಕ್ಕಿ ಜಲಾಶಯಕ್ಕೆ ರೋಪ್ ವೇ ನಿರ್ಮಾಣ.

1೦ ಕೊಡಗು
ಜೀವಾಳ: ಕಾಫಿ, ಕಾಳುಮೆಣಸು, ಪ್ರವಾಸೋದ್ಯಮ, ಕ್ರೀಡೆ
ನಿರೀಕ್ಷೆಗಳು: ಕಾಫಿಗೆ ವಿಶೇಷ ಪ್ಯಾಕೇಜ್.
# ಕಾಡಾನೆ ಹಾವಳಿ ತಡೆಗೆ ಯೋಜನೆ
# ಪ್ರವಾಸೋದ್ಯಮಕ್ಕೆ ಉತ್ತೇಜನ
# ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
#ಕ್ರೀಡಾ ವಿ.ವಿ.

11 ಮೈಸೂರು
ಜೀವಾಳ: ಪಾರಂಪರಿಕ ತಾಣಗಳು, ಪ್ರವಾಸೋದ್ಯಮ, ಶಿಕ್ಷಣ-ಕಲಿಕೆ.
ನಿರೀಕ್ಷೆಗಳು: ಪಾರಂಪರಿಕ 'ಲ್ಯಾನ್ಸ್‌ಡೌನ್' ಕಟ್ಟಡ ಮರು ನಿರ್ಮಾಣ.
# ಮಣಿಪಾಲ್ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ.
# ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಹಾಸ್ಟೆಲ್‌ ಉನ್ನತೀಕರಣ
# ದೇವರಾಜ ಮಾರುಕಟ್ಟೆಯನ್ನು ಮರು ನಿರ್ಮಾಣ.
# ನೂತನ ಸರಕಾರಿ ಬಾಲಕರ ಕಾಲೇಜು ಸ್ಥಾಪನೆ.

12 ಹಾಸನ
ಜೀವಾಳ: ಪಾರಂಪರಿಕ ತಾಣಗಳು, ರಸ್ತೆ ಸಂಪರ್ಕ, ಪ್ರವಾಸೋದ್ಯಮ
ನಿರೀಕ್ಷೆಗಳು: ವಿಮಾನ ನಿಲ್ದಾಣ ಕಾಮಗಾರಿಗೆ ಅಗತ್ಯ ಅನುದಾನ.

# ಕಾಡಾನೆ ಸಮಸ್ಯೆ ಶಾಶ್ವತ ನಿವಾರಣೆಗೆ ಆನೆಧಾಮ.
# ಹಾಸನ ರೈಲ್ವೆ ಮೇಲ್ಲೇತುವೆಗೆ ಅನುದಾನ ನಿರೀಕ್ಷೆ
# ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ.
# ಗೊರೂರು ಹೇಮಾವತಿ ಜಲಾಶಯ ಆವರಣದಲ್ಲಿ ಕೆಆರ್‌ಎಸ್ ಮಾದರಿ ಉದ್ಯಾನ.

13 ಚಾಮರಾಜ ನಗರ
ಜೀವಾಳ: ಅರಣ್ಯ, ಅರಿಶಿನ, ಜಾನಪದ ಹಾಗೂ ಬುಡಕಟ್ಟು ಸಂಸ್ಕೃತಿ
ನಿರೀಕ್ಷೆಗಳು: ಕಾವೇರಿ 2ನೇ ಹಂತದ ಕುಡಿಯುವ ನೀರಿನ 276 ಕೋಟಿ ರೂ. ಯೋಜನೆಗೆ ಅನುದಾನ ನಿರೀಕ್ಷೆ,

#ಹನೂರು ತಾಲೂಕು ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕಿದೆ.
# ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಕ್ರಮ .
# ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ವಾಸಿಸುತ್ತಿರುವ ಹಾಡಿ, ಪೋಡುಗಳ ಅಭಿವೃದ್ಧಿಗೆ ವಿಶೇಷ ಅನುದಾನ.
#ಕೊಳ್ಳೇಗಾಲ- ಹನೂರು ಭಾಗಕ್ಕೆ ಸರಕಾರಿ ಪಾಲಿಟೆಕ್ನಿಕ್, ನರ್ಸಿಂಗ್‌ ಕಾಲೇಜು ಬೇಕಿದೆ.

14 ದಕ್ಷಿಣ ಕನ್ನಡ
ಜೀವಾಳ: ಮೀನುಗಾರಿಕೆ, ಧಾರ್ಮಿಕ ಪ್ರವಾಸೋದ್ಯಮ
ನಿರೀಕ್ಷೆಗಳು: ಮಂಗಳೂರಿಗೆ 24/7 ಕುಡಿಯುವ ನೀರು ಪೂರೈಸಲು ತುಂಬೆ ವೆಂಟೆಡ್ ಡ್ಯಾಮ್‌ ನಲ್ಲಿ 7 ಮೀ. ನೀರು ನಿಲ್ಲಿಸಲು ಕ್ರಮ.

# ಕೇಂದ್ರ ಸರಕಾರ 3931.04 ಕೋಟಿ ರೂ. ಮೊತ್ತದ ಚತುಷ್ಪಥ ಬೈಪಾಸ್ ಹೆದ್ದಾರಿ ಮಂಜೂರು ಮಾಡಿದೆ. ಇದರ ಭೂಸ್ವಾಧೀನ ಮೊತ್ತದ ಅರ್ಧ ಭಾಗವನ್ನು ರಾಜ್ಯ ಸರಕಾರ ಭರಿಸಬೇಕಿದೆ.
# ದಶಕದಿಂದ ಬಾಕಿ ಇರುವ 3ನೇ ಹಂತದ ಮೀನುಗಾರಿಕಾ ಬರ್ತ್ ನಿರ್ಮಾಣ ಪೂರ್ಣಗೊಳಿಸಬೇಕಿದೆ.
# ಮಂಗಳೂರು ಅಥವಾ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಜೂರು ಮಾಡಬೇಕು.
# ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಜಾಗ ಗುರುತಿಸಿದರೂ, ಕ್ರಿಕೆಟ್ ಮೈದಾನಕ್ಕೆ ಇಷ್ಟರ ತನಕ ಯಾವುದೇ ಪ್ರಗತಿಯಾಗಿಲ್ಲ.

15 ಉಡುಪಿ
ಜೀವಾಳ: ಧಾರ್ಮಿಕ ಪ್ರವಾಸೋದ್ಯಮ, ಮೀನುಗಾರಿಕೆ, ಕೃಷಿ
ನಿರೀಕ್ಷೆಗಳು: ಮಲ್ಪೆ ಮೀನುಗಾರಿಕಾ ಬಂದರು 4ನೇ ಹಂತದ ವಿಸ್ತರಣೆ

# ಮೀನುಗಾರಿಕಾ ಡೀಸೆಲ್ ಕೋಟಾ 1.50 ಲಕ್ಷ ಕಿಲೋ ಲೀ.ನಿಂದ 2 ಲಕ್ಷ ಕಿಲೋ ಲೀ.ಗೆ ಏರಿಕೆ.
# ಡೀಮ್ಸ್ ಫಾರೆಸ್ಟ್ ಸಮಸ್ಯೆಯಿಂದಾಗಿ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿದವರಿಗೆ ಇನ್ನೂ ಹಕ್ಕುಪತ್ರ ಕೈಸೇರಿಲ್ಲ.
# ಸರಕಾರಿ ಮೆಡಿಕಲ್ ಕಾಲೇಜು ಬೇಕಿದೆ.
# ಐಟಿ ಕೈಗಾರಿಕಾ ಪಾರ್ಕ್ ನಿರ್ಮಾಣ, ಉದ್ಯೋಗ ಸೃಷ್ಟಿಗೆ ಒತ್ತು.

16 ವಿಜಯನಗರ
ಜೀವಾಳ: ಕೃಷಿ, ಪ್ರವಾಸೋದ್ಯಮ, ಕನ್ನಡ ವಿವಿ
ನಿರೀಕ್ಷೆಗಳು: ಹೊಸ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೆಜ್.

# ಹಂಪಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕಿದೆ.
# ನೀರಾವರಿ ಯೋಜನೆ ಬಲಪಡಿಸಬೇಕಿದೆ.
# ವೈದ್ಯಕೀಯ ಕಾಲೇಜು ಆರಂಭಗೊಳ್ಳಲಿ.
# ಕನ್ನಡ ವಿವಿಗೆ ಅನುದಾನ ಬೇಕಿದೆ.

17 ಬಳ್ಳಾರಿ
ಜೀವಾಳ: ಜೀನ್ಸ್, ಕೃಷಿ ಮತ್ತು ಕೈಗಾರಿಕೆ
ನಿರೀಕ್ಷೆಗಳು: ವಿಮಾನ ನಿಲ್ದಾಣಕ್ಕೆ ಅನುದಾನ ಬಿಡುಗಡೆಯಾಗಬೇಕು

# ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆಗೆ 5 ಸಾವಿರ ಕೋಟಿ ರೂ. ಅಗತ್ಯ.
# ಬಳ್ಳಾರಿ ಕೋಟೆ ಸೇರಿ ಪ್ರವಾಸಿ ತಾಣವಾಗಿ ಅಭಿವೃದ್ಧಿ, ರೂಪ್ ವೇ ನಿರ್ಮಾಣಕ್ಕೆ ಅನುದಾನ.
# ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅನುದಾನ.
# ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ.

18 ಕೊಪ್ಪಳ
ಜೀವಾಳ: ಭತ್ತ ಕೃಷಿ, ಕೈಗಾರಿಕೆ
ನಿರೀಕ್ಷೆಗಳು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

# ನೂತನ ಜಿಲ್ಲಾ ವಿವಿ ಬಲ ಪಡಿಸುವಿಕೆ.
# ಕಿಮ್ಸ್ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಬೇಕಿದೆ.
# ಸಿಂಗಟಾಲೂರು ಏತ ನೀರಾವರಿ ಸೇರಿ ವಿವಿಧ ನೀರಾವರಿ ಯೋಜನೆ ಕಾಮಗಾರಿಗೆ ಅನುದಾನ.
# ವಿಮಾನ ನಿಲ್ದಾಣ ಕಾಮಗಾರಿ ನನೆಗುದಿಗೆ

19 ರಾಯಚೂರು
ಜೀವಾಳ: ಭತ್ತ ಕೃಷಿ, ತೋಟಗಾರಿಕೆ, ವಿದ್ಯುತ್ ಉತ್ಪಾದನೆ
ನಿರೀಕ್ಷೆಗಳು: 5ಎ ಕೆನಾಲ್ ಯೋಜನೆ ಜಾರಿ.

# ಜಿಲ್ಲಾಡಳಿತ ಭವನ, ವಿಮಾನ ನಿಲ್ದಾಣಕ್ಕೆ ಅನುದಾನ
# ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ ಮಂಜೂರು
# ಜವಳಿ ಪಾರ್ಕ್ ನಿರ್ಮಾಣ

20 ಬೆಳಗಾವಿ
ಜೀವಾಳ: ಗಡಿ ಪ್ರದೇಶ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ
ನಿರೀಕ್ಷೆಗಳು: ಖಿಳೇಗಾಂವ್ ಬಸವೇಶ್ವರ ಏತ ನೀರಾವರಿ ಯೋಜನೆ ಶೇ.90ರಷ್ಟು ಮುಗಿದಿದ್ದು, ಪೂರ್ಣಗೊಳಿಸಲು ಆದ್ಯತೆ.

# ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯರ ನೇಮಕ, ವೈದ್ಯಕೀಯ ಸಲಕರಣೆಗಳ ಅಳವಡಿಕೆಗೆ ಅನುದಾನ ನೀಡಿ ಆಸ್ಪತ್ರೆ ಆರಂಭಿಸಬೇಕಿದೆ.
# ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು 3 ಜಿಲ್ಲೆಗಳಾಗಿ ವಿಭಜಿಸುವ ಬೇಡಿಕೆಗೆ ಮನ್ನಣೆ ಸಿಗಲಿ. ಈ ಸಂಬಂಧ ಅನುದಾನ ಹಂಚಿಕೆಯಾಗಬೇಕಿದೆ.
# ಮಲಪ್ರಭಾ ನದಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕಿದೆ.
# ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಘೋಷಣೆಯಾಗಿ ಹಲವು ವರ್ಷಗಳೇ ಕಳೆದರೂ ಅನುಷ್ಠಾನಗೊಂಡಿಲ್ಲ.

21 ಬಾಗಲಕೋಟೆ
ಜೀವಾಳ: ಕಬ್ಬು ತೋಟಗಾರಿಕೆ, ಧಾರ್ಮಿಕ ಪ್ರವಾಸೋದ್ಯಮ
ನಿರೀಕ್ಷೆಗಳು: ಯುಕೆಪಿಗೆ ಅನುದಾನ ಬಿಡುಗಡೆ ಮಾಡಬೇಕಿದೆ.

# 'ಸಾಂಸ್ಕೃತಿಕ ನಾಯಕ' ಬಸವಣ್ಣನ ಕೂಡಲ ಸಂಗಮವನ್ನು ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿಪಡಿಸುವ 800 ಕೋಟಿ ರೂ. ಯೋಜನೆ ಸಾಕಾರ ಕಾಣಬೇಕಿದೆ.
# ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕಿದೆ.
# ಐತಿಹಾಸಿಕ ಐಹೊಳೆ ಗ್ರಾಮದ ಸ್ಥಳಾಂತರಕ್ಕೆ ಕ್ರಮ.
# ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಕನಸು ನನಸಾಗಬೇಕಿದೆ.

22 ದಾವಣಗೆರೆ
ಜೀವಾಳ: ಭತ್ತ, ಜವಳಿ, ಕೈಗಾರಿಕೆ, ಆಕ್ರೋಟೆಕ್, ಪ್ರವಾಸೋದ್ಯಮ
ನಿರೀಕ್ಷೆಗಳು: ದಾವಣಗೆರೆ- ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ 200 ಕೋಟಿ ನಿರೀಕ್ಷೆ

# ದಾವಣಗೆರೆಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು
# ನೀರು ಪೋಲು ತಡೆಯಲು ಹಾಳಾಗಿರುವ ಭದ್ರಾ ನಾಲೆಗಳ ಆಧುನೀಕರಣಕ್ಕೆ ಅನುದಾನ
# ದಾವಣಗೆರೆ ಜಿಲ್ಲೆಗೆ ತೋಟಗಾರಿಕೆ ಕಾಲೇಜು ಇಲ್ಲವೇ ಕೃಷಿ ವಿವಿ
# ಕೈಗಾರಿಕಾ ಕಾರಿಡಾರ್ ಮತ್ತು ವಿಮಾನ ನಿಲ್ದಾಣಕ್ಕೆ ಬೇಕಾದ ಭೂಮಿ ಮಂಜೂರು, ಅನುದಾನ

23 ಚಿತ್ರದುರ್ಗ
ಜೀವಾಳ: ಪ್ರವಾಸೋದ್ಯಮ, ರಸ್ತೆಸಂಪರ್ಕ, ಗಣಿಗಾರಿಕೆ
ನಿರೀಕ್ಷೆಗಳು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗೊಳಿಸಲು ಅನುದಾನ.

# ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಮಾರ್ಗದ ಭೂ ಸ್ವಾಧೀನ ತ್ವರಿತಕ್ಕೆ ಅನುದಾನ.
# ಹಿರಿಯೂರು ತಾಲೂಕಿನ ಮೇಟಿಕುರ್ಕೆ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ಅನುದಾನ.
# ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ.
# ಸರಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ, ಅಭಿವೃದ್ಧಿಗೆ ಅನುದಾನ.

24 ಕೋಲಾರ
ಜೀವಾಳ: ಟೊಮೆಟೊ, ಕೈಗಾರಿಕೆ, ನೀರಾವರಿ
ನಿರೀಕ್ಷೆಗಳು: ಕೆ.ಸಿ. ವ್ಯಾಲಿ 3ನೇ ಹಂತದ ಶುದ್ದೀಕರಣ

# ಸರಕಾರಿ ಮೆಡಿಕಲ್ ಕಾಲೇಜು, ಎಪಿಎಂಸಿ ಮಾರುಕಟ್ಟೆ
# ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೆಜಿಎಫ್ ಕೈಗಾರಿಕಾ ಹಬ್‌ಗೆ ವಿಶೇಷ ಪ್ಯಾಕೇಜ್

25 ಚಿಕ್ಕಬಳ್ಳಾಪುರ
ಜೀವಾಳ: ರೇಷ್ಮೆ ದ್ರಾಕ್ಷಿ ಹೂವು, ರಿಯಲ್ ಎಸ್ಟೇಟ್, ಪ್ರವಾಸೋದ್ಯಮ
ನಿರೀಕ್ಷೆಗಳು: ಎಚ್.ಎನ್. ವ್ಯಾಲಿ ನೀರಿನ 3ನೇ ಹಂತದ ಶುದ್ದೀಕರಣಕ್ಕೆ ಕ್ರಮ.

# ಕೆರೆಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದು.
# ಮೆಡಿಕಲ್ ಕಾಲೇಜಿನ ಕಟ್ಟಡ ಸಮುಚ್ಚಯದಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸುವುದು.
# ಹೈಟೆಕ್ ಹೂ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ.
# ಪ್ರತ್ಯೇಕ ಹಾಲು ಒಕ್ಕೂಟ ರಚನೆ, ಡಿಸಿಸಿ ಬ್ಯಾಂಕ್ ಸ್ಥಾಪನೆ.

25 ತುಮಕೂರು
ಜೀವಾಳ: ತೆಂಗು, ಅಡಕೆ, ಶಿಕ್ಷಣ ಕಲಿಕೆ, ಧಾರ್ಮಿಕ ಪ್ರವಾಸೋದ್ಯಮ
ನಿರೀಕ್ಷೆಗಳು: ಈಗಾಗಲೇ ಸಿಎಂ ನೀಡಿರುವ ಭರವಸೆಯಂತೆ ತುಮಕೂರು ನಗರಾಭಿವೃದ್ಧಿಗೆ 500 ಕೋಟಿ ರೂ. ವಿಶೇಷ ಅನುದಾನದ ನಿರೀಕ್ಷೆ.

# ತುಮಕೂರು ವಿವಿ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಅನುದಾನ.
# ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಗೆ ವೇಗ ತುಂಬಬೇಕಿದೆ.
# ಅಂ.ವಿಮಾನ ನಿಲ್ದಾಣ, ಮೆಟ್ರೋ ತುಮಕೂರಿಗೆ ವಿಸ್ತರಣೆ ಘೋಷಣೆ.
# ತುಮಕೂರಿಗೆ ಹೃದ್ರೋಗ ಆಸ್ಪತ್ರೆ ಘೋಷಣೆ ನಿರೀಕ್ಷಿಸಲಾಗಿದೆ.

27 ಬೆಂಗಳೂರು ಗ್ರಾಮಾಂತರ
ಜೀವಾಳ: ಪ್ರವಾಸೋದ್ಯಮ, ನೇಕಾರಿಕೆ, ಕೈಗಾರಿಕೆ, ಏರ್‌ಪೋರ್ಟ್‌
ನಿರೀಕ್ಷೆಗಳು: ಕಟ್ಟಡ ಕಾರ್ಮಿಕರಿಗೆ ನೀಡುವ 19 ಸೌಕರ್ಯ ನೇಕಾರರಿಗೂ ವಿಸ್ತರಣೆ.

# ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು
# ಸರಕಾರಿ ಎಂಜಿನಿಯರಿಂಗ್ ಕಾಲೇಜು, ಡಿಪ್ಲೊಮಾ ಕಾಲೇಜು ನಿರೀಕ್ಷೆ
# ಜಿಲ್ಲೆಯ 4 ತಾಲೂಕುಗಳಿಗೂ ಮೆಟ್ರೊ ವಿಸ್ತರಣೆ ನಿರೀಕ್ಷೆ
# ಜಿಲ್ಲಾ ಕೇಂದ್ರ ಘೋಷಣೆಯ ಕೂಗಿಗೆ ಸ್ಪಂದನೆ ಬೇಕಿದೆ.

23 ರಾಮನಗರ
ಜೀವಾಳ: ರೇಷ್ಮೆ ರಿಯಲ್ ಎಸ್ಟೇಟ್, ಪ್ರವಾಸೋದ್ಯಮ, ರಸ್ತೆ ಸಂಪರ್ಕ
ನಿರೀಕ್ಷೆಗಳು: ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆಯಾಗಿ ಅಭಿವೃದ್ಧಿಪಡಿಸುವುದು.

# ಆಧುನಿಕ ರೇಷ್ಮೆ ಮಾರುಕಟ್ಟೆ ನಿರ್ಮಾಣ.
# ರಾಜೀವ್ ಗಾಂದಿ ಆರೋಗ್ಯ ವಿವಿ, ಸಂಸ್ಕೃತ ವಿವಿಗಳ ಕಾರಾರಂಭ.
# ಅರ್ಕಾವತಿ ನದಿ ಶುದ್ದೀಕರಣ.
# ಚನ್ನಪಟ್ಟಣದ ಗೊಂಬೆ ಉದ್ಯಮ ಅಭಿವೃದ್ಧಿ,

29 ಕಲಬುರಗಿ
ಜೀವಾಳ: ತೊಗರಿ, ಸಿಮೆಂಟ್ ಉತ್ಪಾದನೆ, ನೀರಾವರಿ
ನಿರೀಕ್ಷೆಗಳು: ತೊಗರಿ ಅಭಿವೃದ್ಧಿ ಮಂಡಳಿ ಬಲವರ್ಧನೆ

# ಖಾಲಿ ಹುದ್ದೆಗಳ ಭರ್ತಿ, ಅರಣೀಕರಣ
# ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರೂ. ಅನುದಾನ
# ಕಲಬುರಗಿಗೆ ಎರಡನೇ ವರ್ತುಲ ರಸ್ತೆ
# ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ,

30 ಬೀದರ್
ಜೀವಾಳ: ಸೋಯಾ, ಕಬ್ಬು ಕೃಷಿ, ಐತಿಹಾಸಿಕ ತಾಣಗಳು
ನಿರೀಕ್ಷೆಗಳು: ಜಿಲ್ಲಾ ಕಚೇರಿಗಳ ಸಂಕೀರ್ಣ ಕಾಮಗಾರಿ ಚಾಲನೆ

#ಮಿನಿ ವಿಧಾನಸೌಧ ನಿರ್ಮಾಣ
#ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡುವುದು
# ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನಶ್ಚತನ

31 ಯಾದಗಿರಿ
ಜೀವಾಳ: ತೊಗರಿ, ಹತ್ತಿ
ನಿರೀಕ್ಷೆಗಳು: ಕೃಷ್ಣಾ ಮೇಲ್ದಂಡೆ ಯೋಜನೆಗೆ 3ನೇ ಹಂತದ ಯೋಜನೆ

# ಬಾಡಿಯಾಳ ಕೈಗಾರಿಕಾ ಪ್ರದೇಶ ಅಭಿವೃದ್ಧಿ
# ಜವಳಿ ಪಾರ್ಕ್‌ ಸ್ಥಾಪನೆ
# ಗುಳೆ ತಡೆಯಲು ಉದ್ಯೋಗ ಸೃಷ್ಟಿ

Comments