ಗಂಟೆಗೆ 350 ಕಿ.ಮೀ. ವೇಗ ಚಲಿಸುವ ಪುಷ್ಪಕ ವಿಮಾನ ವಿಶ್ವದಲ್ಲೇ ಮೊದಲ ಪರೀಕ್ಷೆನಡೆಸಿದ ಇಸ್ರೋ
(ನಿಜ! ಉಪಗ್ರಹಗಳನ್ನು ಕಕ್ಷೆಯೆತ್ತರಕ್ಕೆ ಕಳುಹಿಸಿ ಜವಾಬ್ದಾರಿ ಮುಗಿಸುವ ರಾಕೆಟ್‌ಗಳು ಉರಿದು ಬೂದಿಯಾಗುವಾಗ, ಅದರ ಬಿಡಿಭಾಗಗಳು ಕಳಚಿ ಸಾಗರಕ್ಕೆ ಬೀಳುವಾಗ, ಕೋಟ್ಯಂತರ ರೂ. ಲೆಕ್ಕಾಚಾರದ ಅಂಕಿಗಳು ಕಣ್ಮುಂದೆ ಹಾದುಹೋಗುತ್ತವೆ. ಬಾಹ್ಯಾಕಾಶ ಯೋಜನೆಯನ್ನು ದುಬಾರಿ ಎಂದು ಪರಿಭಾವಿಸುವ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಇಸ್ರೋ ಯಶಸ್ವಿಯಾಗಿ ಪರಿಚಯಿಸಿರುವ ಮರುಬಳಕೆಯ ಉಡ್ಡಯನ ವಾಹನ (ಆರ್‌ಎಲ್‌ವಿ) 'ಪುಷ್ಪಕ್' ಈ ದೇಶಕ್ಕೆ ಏನೆಲ್ಲ ಧೈರ್ಯಗಳನ್ನು ನೀಡುತ್ತಿದೆ?)
ಇಸ್ರೋದ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮಹತ್ವಾಕಾಂಕ್ಷೆಯ ಯೋಜನೆಯಾದ ಮರುಬಳಕೆ ಉಡ್ಡಾಯನ ವಾಹನದ (ಆರ್‌ಎಲ್‌ವಿ ಲೆಕ್ಸ್2) ಪ್ರಯೋಗ ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಪಟ್ಟಣಕ್ಕೆ ಸಮೀಪದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಲ್ಲಿ ಬೆಳಗ್ಗೆ 6.30ರಿಂದ ಆರಂಭವಾದ ಕಾರ್ಯಾಚರಣೆ 7.10ಕ್ಕೆಯಶಸ್ವಿಯಾಗಿ ಪೂರ್ಣಗೊಂಡಿತು. ವಾಯುಪಡೆಯ ಹೆಲಿಕಾಪ್ಟರ್ ಚಿನೂಕ್, ಪುಷ್ಪಕ್ ಹೊಸ ಹೆಸರಿನ ಆರ್‌ಎಲ್‌ವಿ ಲೆಕ್ಸ್ 2 ಅನ್ನು ಹೊತ್ತು ನಭಕ್ಕೆ ಚಿಮ್ಮಿತು. ಸುಮಾರು 4.5 ಕಿ.ಮೀ. ಎತ್ತರ ಕ್ರಮಿಸಿದ ಚಿನೂಕ್, ಪುಷ್ಪಕ್ ಅನ್ನು ಬಿಡುಗಡೆಗೊಳಿಸಿತು. ಹೊರ ಬರುತ್ತಿದ್ದಂತೆ ವೇಗ ಪಡೆದುಕೊಂಡ ಪುಷ್ಪಕ್ ಗಂಟೆಗೆ 350 ಕಿ.ಮೀ. ವೇಗದಲ್ಲಿರನ್ ವೇ ಕಡೆಗೆ ನುಗ್ಗಿಬಂತು. ಕ್ಷಣಾರ್ಧ ದಲ್ಲಿರನ್ ವೇ ಮೇಲೆ ಬಂದಿಳಿಯಿತು. ಮರುಬಳಕೆ ರಾಕೆಟ್ ಅಭಿವೃದ್ಧಿಪಡಿಸುವಲ್ಲಿ ಇದು ಮೂರನೇ ಪ್ರಯೋಗವಾಗಿದೆ. 2016ರ ಪರೀಕ್ಷಾರ್ಥ ಹಾರಾಟದ ಬಳಿಕ ಈ ಹಿಂದೆ 2023ರ ಏಪ್ರಿಲ್ 2ರಲ್ಲಿ ಇದೇ ಪ್ರದೇಶದಲ್ಲಿ ಆರ್‌ಎಲ್‌ವಿ ಲೆಕ್ಸ್ 01 ಹೆಸರಿನ ಪ್ರಯೋಗ ಯಶಸ್ವಿಯಾಗಿತ್ತು. ಅಂದು ಜರುಗಿದ ಪ್ರಯೋಗದಲ್ಲಿ ಆರ್ ಎಲ್‌ವಿಯನ್ನು ರನ್ ವೇ ಮಧ್ಯದಲ್ಲಿ ಇಳಿಯುವಂತೆ ಕಂಪ್ಯೂಟರೀಕೃತ ನಿರ್ದೇಶನ ನೀಡಲಾಗಿತ್ತು. ಆದರೆ ಈ ಬಾರಿ ರನ್ ವೇನಿಂದ ಆಚೀಚೆ ನಿರ್ದೇಶನ ನೀಡಿ, ಸ್ವಯಂ ಲೆಕ್ಕಾಚಾರದೊಂದಿಗೆ ತನ್ನಷ್ಟಕ್ಕೆ ತಾನೇ ರನ್ ವೇನಲ್ಲಿ ಇಳಿಯುವಂತೆ ಯೋಜಿಸಲಾಗಿತ್ತು. ಟೇಕ್ ಡೌನ್ ಮತ್ತು ಲ್ಯಾಂಡಿಂಗ್‌ನಲ್ಲಿ ಅತ್ಯಂತ ನಿಖರವಾಗಿ ಭೂಮಿಗಿಳಿದಿದ್ದು, ಇಡೀ ಪ್ರಯೋಗ ಯಶಸ್ವಿಯಾಯಿತು. ವೇಗ ನಿಯಂತ್ರಣದ ಸಾಹಸ: ಗಂಟೆಗೆ 350 ಕಿ.ಮೀ. ವೇಗದಲ್ಲಿ ನುಗ್ಗಿಬರುವ ಪುಷ್ಪಕ್‌ನ್ನು ನಿಯಂತ್ರಣಗೊಳಿಸಲು ಇಸ್ರೋ ವಿಶೇಷ ವ್ಯವಸ್ಥೆ ರೂಪಿಸಿತ್ತು. ರನ್ ವೇ ಸಮೀಪಿಸು ತ್ತಿದ್ದಂತೆ ಅದರ ಹಿಂಭಾಗದಲ್ಲಿ ಅಳವಡಿಸಿದ್ದ ಪ್ಯಾರಾಚೂಟ್ ತೆರೆದುಕೊಂಡಿತು. ನಂತರ ಲ್ಯಾಂಡಿಂಗ್ ಗೇರ್ ಬ್ರೇಕ್ ಮತ್ತು ಮೂತಿಯಲ್ಲಿ ಅಳವಡಿಸಲಾದ ಸ್ಟಿಯರಿಂಗ್ ಸಿಸ್ಟ್ಂ ಮೂಲಕ ವೇಗ ನಿಯಂತ್ರಿಸಿ ರನ್ ವೇ ಮೇಲೆ ಅತ್ಯಂತ ಸೂಕ್ಷ್ಮ ಹಾಗೂ ಮೃದುವಾಗಿ ನಿಂತಿತು. ಮಾನವರಹಿತ, ಅತ್ಯಂತ ಹೆಚ್ಚಿನ ವೇಗ ನಿಯಂತ್ರಿಸುವ ಪ್ರಯೋಗ ಇದಾಗಿದೆ.
ಸೋಮನಾಥ್ ಸಂತಸ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಪ್ರಯೋಗ ವೀಕ್ಷಣೆಗಾಗಿ ಗುರುವಾರ ತಡರಾತ್ರಿ ಡಿಆರ್‌ಡಿಒ ಅತಿಥಿಗೃಹಕ್ಕೆ ಆಗಮಿಸಿದ್ದರು. ನಸುಕಿನ 5 ಗಂಟೆಗೆ ನಡೆದ ಪ್ರಯೋಗ ವನ್ನು ವೀಕ್ಷಿಸಿ, ಯಶಸ್ವಿಯಾಗಿ ಪ್ರಯೋಗ ನಡೆಸಿದ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಅಭಿನಂದಿಸಿದರು. ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ.ಎಸ್.ಉನ್ನಿಕೃಷ್ಣನ್ ನಾಯರ್, ಯೋಜನೆಯ ಪ್ರಮುಖರಾದ ಪಿ.ಸುನಿಲ್, ಜೆ.ಮುತ್ತುಪಾಂಡ್ಯನ್, ಬಿ.ಕಾರ್ತಿಕ್ ಸೇರಿದಂತೆ ವಿಜ್ಞಾನಿಗಳು, ಎಟಿಆರ್‌ನ ಸಿಬ್ಬಂದಿ ಮತ್ತು ತಂತ್ರಜ್ಞರು ಸ್ಥಳದಲ್ಲಿದ್ದರು.
@ಇದು ಇಸ್ರೋದ ಸಂಪೂರ್ಣ ದೇಶಿ ಪ್ರಯೋಗ@
-:ಹೆಲಿಕಾಪ್ಟರ್ ಮೂಲಕ ಆರ್‌ಎಲ್‌ವಿಯನ್ನು ಭೂಮಿಯಿಂದ ಮೇಲಕ್ಕೇರಿಸಿ ನಂತರ ರನ್‌ವೇಗೆ ಇಳಿಸುವುದು ವಿಶಿಷ್ಟ ಪ್ರಯತ್ನ. ಇದು ಸಂಪೂರ್ಣ ದೇಸೀಯ ಎಂಬುದು ಇನ್ನೊಂದು ವಿಶೇಷ. ದೇಶದಲ್ಲೇ ನಿರ್ಮಿಸಿದ ನಾವಿಕ (ನ್ಯಾವಿಗೇಷನ್ ವ್ಯವಸ್ಥೆ) ಬ್ಯಾಂಡ್ ರಾಡಾರ್ ಹಾಗೂ ಸೆನ್ಸಾರ್ ಸೇರಿದಂತೆ ಎಲ್ಲವೂ ದೇಸೀಯವಾಗಿ ನಿರ್ಮಿಸಲಾಗಿದೆ. ಒಂದು ತಿಂಗಳಿನಿಂದ ಡಿಆರ್‌ಡಿಒ ವ್ಯಾಪ್ತಿಯ ಎಟಿಆರ್ ಪ್ರದೇಶದಲ್ಲಿ ಇಸ್ರೋ ಪ್ರಯೋಗ ನಡೆಸುತ್ತಿತ್ತು.
@ಪುಷ್ಪಕ ವಿಮಾನ ಇಸ್ರೋದ್ದೇ ಜಮಾನ @
-:ಹುಶಃ ಅದೊಂದು ಚಿತ್ರ ಯಾರ ಕಣ್ಣಿಂದಲೂ ಅಳಿಸಿಹೋಗದು. ಪ್ರಪಂಚದ ಮೊದಲ ಮರುಬಳಕೆ ಮಾಡಬಹುದಾದ ತಂತ್ರಜ್ಞಾನ ಹೊಂದಿದ್ದ ಬಾಹ್ಯಾಕಾಶ ನೌಕೆ 'ಕೊಲಂಬಿಯಾ'. ಅದು 2003, ಜನವರಿ 16. ನಾಸಾದ ಈ ಕೊಲಂಬಿಯಾ ನೌಕೆಯು ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಕಲ್ಪನಾ ಚಾವ್ಹಾ ಸೇರಿದಂತೆ 7 ಗಗನಯಾತ್ರಿಗಳನ್ನು ನಭಕ್ಕೆ ಹೊತ್ತೊಯ್ದಿತ್ತು. ಒಟ್ಟು 15 ದಿನ, 22 ಗಂಟೆ, 20 ನಿಮಿಷ, 32 ಸೆಕೆಂಡುಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದ ನೌಕೆಯು ಫೆಬ್ರವರಿ 1ರಂದು ಮರಳಿ ಭೂ ವಾತಾವರಣವನ್ನು ಪ್ರವೇಶಿಸಿದಾಗ, ಇನ್ನೇನು ಲ್ಯಾಂಡಿಂಗ್‌ಗೆ 16 ನಿಮಿಷ ಇದೆ ಎನ್ನುವಾಗ ನೌಕೆ ಸುಟ್ಟು ಬೂದಿಯಾಯಿತು. ಬಾಹ್ಯ ಟ್ಯಾಂಕ್‌ನಿಂದ ಹೊರಬಂದ ಬುರುಗು ಸೃಷ್ಟಿಸಿದ ಬೆಂಕಿಯು, ನೌಕೆಯ ಎಡ ರೆಕ್ಕೆಗೂ ತಗುಲಿ ಈ ಅವಘಡ ಘಟಿಸಿತ್ತು.
ಟೆಕ್ಸಾಸ್ ಸುತ್ತಮುತ್ತ ನೂರಾರು ಮೈಲುಗಳವರೆಗೆ ಚದುರಿ ಬಿದ್ದ ಅದರ ಸುಮಾರು 84 ಸಾವಿರ ಸಣ್ಣ ಸಣ್ಣ ಭಾಗಗಳನ್ನು ನಾಸಾ ಮರು ಸಂಗತಿ ಸಂಗ್ರಹಿಸಿ ಕೆನಡಿ ಅದನ್ನೀಗ ಬಾಹ್ಯಾಕಾಶ ಕೇಂದ್ರದ ವೆಹಿಕಲ್ ಅಸೆಂಬ್ಲಿ ಬಿಲ್ಡಿಂಗ್‌ನಲ್ಲಿಟ್ಟಿದೆ. ನಾಸಾವು ಆ ಕಾಲಘಟ್ಟದಲ್ಲಿಯೇ ಕೊಲಂಬಿಯಾದಂತೆ ಮರುಬಳಸಲ್ಪಡುವ 5 ನೌಕೆಗಳನ್ನು ಹೊಂದಿತ್ತು: ಚಾಲೆಂಜರ್, ಕೊಲಂಬಿಯಾ, ಅಟ್ಲಾಂಟಿಸ್, ಡಿಸ್ಕವರಿ, ಎಂಡೀವರ್ ಮತ್ತು ಎಂಟರ್‌ಪೈಸ್. ಈ ಪೈಕಿ ಎಂಟರ್‌ಪೈಸ್ ಎಂದಿಗೂ ಹಾರಾಟವನ್ನೇ ನಡೆಸಲಿಲ್ಲ. ನಾಸಾಕ್ಕೂ ಮೊದಲು ರಷ್ಯಾವು 'ಬುರಾನ್' ಎಂಬ ಮರುಬಳಕೆ ಉಡ್ಡಯನ ವಾಹನವನ್ನು ತಾಂತ್ರಿಕ ದೋಷಗಳ ಕಾರಣಗಳಿಂದಾಗಿ 2002ರಲ್ಲಿ ನಿವೃತ್ತಗೊಳಿಸಿತ್ತು. ಬಳಿಕ, ಮರುಬಳಕೆಯಾಗುವ ನೌಕೆಗಳಲ್ಲಿನ ದೋಷ ಪುನರಾವರ್ತನೆಗಳಿಂದ ರೋಸಿ ಹೋದ ನಾಸಾ ಕೂಡ 2011ರಲ್ಲಿ ತನ್ನೆಲ್ಲ ನೌಕೆಗಳನ್ನೂ E ನಿವೃತ್ತಗೊಳಿಸಿತು. ನಾಸಾವು ರಷ್ಯಾದ ಸೊಯೆಜ್ ನೌಕೆ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸತೊಡಗಿತು. ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಅಮೆರಿಕ ಈಗ ಎಲಾನ್ ಮಸ್ಕ್ ಒಡೆತನದ 'ಸ್ಪೇಸ್ ಎಕ್ಸ್'ನ ಮರುಬಳಕೆಯ ರಾಕೆಟ್‌ಗಳನ್ನೇ ನೆಚ್ಚಿಕೊಳ್ಳುತ್ತಿದೆ. ಹೀಗೆ, ಬಾಹ್ಯಾಕಾಶ ಸಂಶೋಧನಾ ಜಗತ್ತಿನ ಎರಡು ಘಟಾನುಘಟಿ ಸಂಸ್ಥೆಗಳು ಮರುಬಳಕೆ ನೌಕೆಯ ಕುರಿತು ಕೆಲಸವನ್ನೇ ನಿಲ್ಲಿಸಿ ದಶಕಗಳು ಕಳೆದ ಹೊತ್ತಿನಲ್ಲಿ ಭಾರತದ ಇಸ್ರೋ ನಿನ್ನೆ (ಮಾ.22) ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಮರುಬಳಕೆ ಉಡ್ಡಯನ ವಾಹನ (ಆರ್‌ಎಲ್‌ವಿ) 'ಪುಷ್ಪಕ್' ರಾಕೆಟ್‌ನ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ! ಇಸ್ರೋ ಮೂಲಗಳ ಪ್ರಕಾರ ನಮ್ಮ 'ಪುಷ್ಪಕ್' ಕೂಡ ಬಹುತೇಕ ಹೋಲುವಂಥದ್ದು ಕೊಲಂಬಿಯಾದಂಥ ನೌಕೆಗಳನ್ನೇ. ಆದರೆ, ಇದು ಅಮೆರಿಕ ಹಾಗೂ ರಷ್ಯಾದ ತಂತ್ರಜ್ಞಾನಗಳಿಗಿಂತ ಭಿನ್ನ. ನಾಸಾ ಆಗಲೀ, ರಾಸ್ಕೊಮಸ್ ಆಗಲೀ ನಭಕ್ಕೆ ಕಳುಹಿಸಿದ್ದ ಮರುಬಳಕೆ ನೌಕೆಗಳು 20ನೇ ಶತಮಾನದ ಹಳೆ ತಂತ್ರಜ್ಞಾನದವು. ಮರುಬಳಕೆಯ ಉಡ್ಡಯನ ವಾಹನಗಳ ಬಗ್ಗೆ ದಶಕಗಳ ಕಾಲ ಸಂಶೋಧನೆ ಕೈಗೊಂಡ ಬಳಿಕ ಇಸ್ರೋ 21ನೇ ಶತಮಾನದ, ಅಪ್‌ಡೇಟೆಡ್ ತಂತ್ರಜ್ಞಾನವನ್ನು ಪುಷ್ಪಕ್ ನೌಕೆಗೆ ಅಳವಡಿಸಿದೆ. ರಾಮಾಯಣ ಕಾಲಘಟ್ಟದ 'ಪುಷ್ಪಕ ವಿಮಾನ'ದ ಹೆಸರನ್ನೇ ಈ ನೌಕೆಗೆ ಇಡಲಾಗಿದೆ.
Comments
Post a Comment